ಒಳ ಮೀಸಲಾತಿ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಗೊಳಿಸಲು SDPi ಆಗ್ರಹ

Prasthutha|

- Advertisement -

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಹೋರಾಟ ಗಾರರನ್ನು ಬಂಧಿಸಿದ ಬಿಜೆಪಿ ಸರಕಾರದ ಕ್ರಮ ಸಂವಿಧಾನಕ್ಕೆ ಎಸಗುವ ಅಪಚಾರವಾಗಿದೆ .

- Advertisement -

ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿ, ನ್ಯಾಯ ಕೊಡುವುದು ಬಿಟ್ಟು ಸರಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಇಳಿದಿರುವುದು ಖಂಡನಾರ್ಹ. ಮಾತ್ರವಲ್ಲ 62 ವರ್ಷ ಪ್ರಾಯದ ಹೋರಾಟಗಾರರೊಬ್ಬರ ತಲೆಗೆ ಪೊಲೀಸರು ಹಲ್ಲೆ ನಡೆಸಿ ಗಾಯಗೊಳಿಸಿರುವ ಕೃತ್ಯ ಪೊಲೀಸ್ ಇಲಾಖೆಯ ಮೂಲಕ ಸರಕಾರ ನಡೆಸುತ್ತಿರುವ ದರ್ಪವಾಗಿದೆ. ಸರಕಾರ ಕೂಡಲೇ ಹೋರಾಟಗಾರರ ಬೇಡಿಕೆಯನ್ನು ಪರಿಗಣಿಸಬೇಕು ಮತ್ತು ಈ ಕೂಡಲೇ ಬಂಧಿಸಿರುವವರನ್ನು ಬಿಡುಗಡೆಗೊಳಿಸ ಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Join Whatsapp
Exit mobile version