Home ಟಾಪ್ ಸುದ್ದಿಗಳು ಗಣಪತಿ ಬೀದಿ ‘ಸ್ಮಾರಕ ನಾಮಫಲಕ’ ಮರು ಸ್ಥಾಪಿಸಲು ನಗರಸಭೆ ಆಯುಕ್ತರು, ಅಧ್ಯಕ್ಷರಿಗೆ ಮನವಿ ಸಲ್ಲಿಸಿದ SDPI...

ಗಣಪತಿ ಬೀದಿ ‘ಸ್ಮಾರಕ ನಾಮಫಲಕ’ ಮರು ಸ್ಥಾಪಿಸಲು ನಗರಸಭೆ ಆಯುಕ್ತರು, ಅಧ್ಯಕ್ಷರಿಗೆ ಮನವಿ ಸಲ್ಲಿಸಿದ SDPI ನಿಯೋಗ

ಮಡಿಕೇರಿ: ನಗರದ ಗಣಪತಿ ಬೀದಿಗೆ ಹಿಂದೆ ಮಡಿಕೇರಿ ಉಪವಿಭಾಗಾಧಿಕಾರಿಗಳಾಗಿದ್ದ ದಿವಂಗತ ಕೊಂಗಂಡ ಶ್ರೀ ಗಣಪತಿ ರವರು ಅವರ ಸ್ವಂತ ಖರ್ಚಿನಿಂದ ಪಂಪಿನ ಕೆರೆಯ ಕುಡಿಯುವ ನೀರನ್ನು ಗಣಪತಿ ಬೀದಿಯ ನಿವಾಸಿಗಳು ಹಾಗೂ ನಗರದ ಇನ್ನಿತರ ಭಾಗದ ನಿವಾಸಿಗಳ ಉಪಯೋಗಕ್ಕೆ ಪೈಪ್ ಲೈನ್ ಹಾಕಿಸಿ ಕೊಟ್ಟ ಅವರ ನೆನಪಿಗಾಗಿ ಗಣಪತಿ ಬೀದಿ ಎಂದು ನಾಮಕರಣ ಮಾಡಲಾಗಿದ್ದು ಇವರ ನೆನಪಿಗಾಗಿ ದಿವಂಗತ ಶ್ರೀ ಕೊಂಗಂಡ ಗಣಪತಿಯವರ ಸ್ಮಾರಕ ಫಲಕವನ್ನು ಗಣಪತಿ ಬೀದಿಯ ನೀರಿನ ಟ್ಯಾಂಕ್ ಹತ್ತಿರ ಅಳವಡಿಸಿದ್ದರು,, ಇತ್ತೀಚೆಗೆ ನಗರಸಭೆಯವರು ಗಣಪತಿ ಬೀದಿಯನ್ನು ಅಗಲೀಕರಣ ಮಾಡುವ ಕೆಲಸವನ್ನು ಕೈಗೆತ್ತಿಕೊಂಡಾಗ ನೀರಿನ ಟ್ಯಾಂಕನ್ನು ತೆಗೆಯುವಾಗ ಸ್ಮಾರಕ ನಾಮಫಲಕವನ್ನು ತೆಗೆದಿರುತ್ತಾರೆ..
ಇದನ್ನು ಮರು ಸ್ಥಾಪಿಸುವ ಸಲುವಾಗಿ ಇಂದು ನಗರಸಭೆಯ ಎಸ್ಡಿಪಿಐ ಸದಸ್ಯರಾದ ಅಮೀನ್ ಮೋಹಸಿನ್ ಹಾಗೂ, ಗಣಪತಿ ಬೀದಿ ಎಸ್ಡಿಪಿಐ ಅಧ್ಯಕ್ಷರಾದ ಉಬೈದ್, ಕಾರ್ಯಕರ್ತರಾದ ಜಲೀಲ್ ಹಾಗು ಅಮೀನ್ ನವಾಬ್ ರವರು ನಗರಸಭೆ ಆಯುಕ್ತರು ಮತ್ತು ನಗರಸಭೆ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದರು…

Join Whatsapp
Exit mobile version