SDPI ವತಿಯಿಂದ SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

Prasthutha|

ಪಾವೂರು: SSLC ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆ ಪಾವೂರು ಇಲ್ಲಿನ ವಿಧ್ಯಾರ್ಥಿಗಳಾದ ಫಾತಿಮ ನದಾ ಪ್ರಥಮ ಮು.ಮುಹಶೀನ್ ದ್ವಿತೀಯ ಹಾಗೂ ಫಾತಿಮಾ ತಾನಿಯಾ ತೃತೀಯ ಸ್ಥಾನ ಪಡೆದಿದ್ದು, ಪಜೀರ್ ಅವೇ ಮರಿಯಾ ಶಾಲೆಯ ವಿಧ್ಯಾರ್ಥಿ ಸಾರ ಫರ್ಹಾ ಉತ್ತಮ ಅಂಕ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ SDPI ಪಾವೂರು ಗ್ರಾಮಸಮಿತಿಯ ವತಿಯಿಂದ ಶಾಲುಹೊದಿಸಿ, ಸ್ಮರಣಿಕೆ ಹಾಗೂ ಹೂಗುಚ್ಚ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

- Advertisement -

ಪಾವೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಅನ್ಸಾರ್ ಇನೋಳಿ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪಾವೂರು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಇನೋಳಿ,ಖತೀಜ ಲತೀಫ್,ಮುನ್ನೂರು ಬ್ಲಾಕ್ ಅಧ್ಯಕ್ಷರು ಕಮರುದ್ದೀನ್, ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಸಲೀಮ್ ಇನೋಳಿ,ಕೋಶಾಧಿಕಾರಿ ಸಿದ್ದೀಕ್,ಪಾವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಸಿರ್ ಮಲಾರ್ ಉಪಸ್ಥಿತರಿದ್ದರು. ಗ್ರಾಮ ಸಮಿತಿಯ ಕಾರ್ಯದರ್ಶಿ ಆಸಿಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Join Whatsapp
Exit mobile version