Home ಟಾಪ್ ಸುದ್ದಿಗಳು SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದೇರಳಕಟ್ಟೆಯಲ್ಲಿ ಪಕ್ಷದ 15 ನೇ ಸಂಸ್ಥಾಪನಾ ದಿನಾಚರಣೆ

SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದೇರಳಕಟ್ಟೆಯಲ್ಲಿ ಪಕ್ಷದ 15 ನೇ ಸಂಸ್ಥಾಪನಾ ದಿನಾಚರಣೆ

ಮಂಗಳೂರು: 15 ನೇ ವರ್ಷದಡೆಗೆ ಸ್ವಾಭಿಮಾನಿ ಮತ್ತು ಜನಪರ ರಾಜಕೀಯದ ದಿಟ್ಟ ಹೆಜ್ಜೆಗಳು ಎಂಬ ಘೋಷಣೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದೇಶಾದ್ಯಂತ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದೇರಳಕಟ್ಟೆಯ ಪಕ್ಷದ ಕಛೇರಿಯ ಮುಂಭಾಗದಲ್ಲಿ ನಡೆದ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ನೆರವೇರಿಸಿದರು.


ಸಂಸ್ಥಾಪನಾ ದಿನದ ಸಂದೇಶ ನೀಡಿದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಯವರು 2009ರಲ್ಲಿ ನಮ್ಮ ನಾಯಕರ ಪಕ್ಷ ಸ್ಥಾಪನೆಯ ಉದ್ದೇಶ ಸ್ವಾತಂತ್ರ್ಯಾ ನಂತರ ದೇಶದಲ್ಲಿ ವಿಭಿನ್ನ ಸಮಸ್ಯೆಗಳಿಗೆ ಮೂಲ ಕಾರಣ ಹಸಿವು ಮತ್ತು ಭಯ ಕಾರಣವಾಗಿ ಕಂಡಿದ್ದರು ಅದೇ ಕಾರಣಕ್ಕಾಗಿ ಪಕ್ಷದ ಘೋಷಣೆಯನ್ನು ಹಸಿವು ಮುಕ್ತ ಭಯ ಮುಕ್ತ ಘೋಷಣೆಯಾಗಿ ಇಡಲಾಯಿತು ಆದರೆ ಹಸಿವು ಭಯ ಇಂದಿಗೂ ದೇಶದಲ್ಲಿ ತಾಂಡವವಾಡುತ್ತಿರುವ ಅತೀದೊಡ್ಡ ಸಮಸ್ಯೆ ಆಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಪ್ಯಾಸಿಸ್ಟರ ಆಡಳಿತದಲ್ಲಿರುವ ಈ ದೇಶದ ಜನರು ಹಸಿವು ಮತ್ತು ಭಯದ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ, ಇದರ ವಿರುದ್ಧ ರಾಜಕೀಯ ಹೋರಾಟ ಮುಂದುವರೆಸಲು ಕರೆ ನೀಡಿದರು”.

ಈ ಸಂದರ್ಭದಲ್ಲಿ SDPI ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆ , ಅಶ್ರಫ್ ಅಡ್ಡೂರು, ಪಕ್ಷದ ರಾಜ್ಯ ಸಂಯೋಜಕರಾದ ನವಾಝ್ ಉಲ್ಲಾಳ,ಮಂಗಳೂರು ಕ್ಷೇತ್ರಾಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್,ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ವ ಮಂಗಳೂರು ಕ್ಷೇತ್ರ ಸಮಿತಯ ಪದಾಧಿಕಾರಿಗಳು ಮತ್ತು ಇತರ ಮುಖಂಡರು ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು ಮೊಯಿದೀನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು

ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜಿಲ್ಲಾದ್ಯಂತ ದ್ವಜಾರೋಹಣ ‌ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಿತು.

Join Whatsapp
Exit mobile version