Home ಟಾಪ್ ಸುದ್ದಿಗಳು ಮಂಗಳೂರು: ‘ಜನಪ್ರಿಯ ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ಉದ್ಘಾಟನೆ

ಮಂಗಳೂರು: ‘ಜನಪ್ರಿಯ ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆ ಉದ್ಘಾಟನೆ

ಮಂಗಳೂರು: ನಗರದ ಪಡೀಲ್-ಕೊಡಕ್ಕಲ್ ನಲ್ಲಿ ನಿರ್ಮಾಣಗೊಂಡಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರವಿವಾರ ಉದ್ಘಾಟನೆಗೊಂಡಿದೆ.


ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ. ನಮ್ಮೀ ಆಸ್ಪತ್ರೆಯಲ್ಲಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ನುರಿತ ವೈದ್ಯಕೀಯ ತಜ್ಞರು ಸಿದ್ದರಿದ್ದಾರೆ. 130 ಬೆಡ್ ವ್ಯವಸ್ಥೆಯನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯ ಸೇವೆಗಳು ಲಭ್ಯವಿದೆ ಎಂದರು.


ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಆಸ್ಪತ್ರೆಗಳನ್ನು ಸ್ಥಾಪಿಸಲು ಅದೆಷ್ಟು ಕಷ್ಟವಿದೆ ಎಂದು ಅದರ ಸ್ಥಾಪಕರಿಗೆ ಮಾತ್ರ ತಿಳಿದಿರುವ ವಿಚಾರ. ಆಸ್ಪತ್ರೆ ಸಹಿತ ಯಾವುದೇ ಉದ್ಯಮಗಳು ಸ್ಥಾಪನೆಯಾದಾಗ ಸ್ಥಳೀಯರು ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕಿದೆ. ಇದರಿಂದ ಪರೋಕ್ಷವಾಗಿ ಸ್ಥಳೀಯರಿಗೆ ಕೂಡಾ ಲಾಭವಿದೆ. ಇಲ್ಲಿನ ಜಮೀನಿನ ದರದಲ್ಲೂ ಹೆಚ್ಚಳವಾಗಲಿದೆ ಎಂದ ಯು.ಟಿ.ಖಾದರ್ ಈ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಆಸ್ಪತ್ರೆಯ ಸ್ಥಾಪಕರು ಕಟಿಬದ್ಧರಾಗಿದ್ದಾರೆ. ಅಲ್ಲದೆ ಆಸ್ಪತ್ರೆಯ ಸ್ಥಾಪಕ ಡಾ. ಅಬ್ದುಲ್ ಬಶೀರ್ ಅವರ ಸಾಹಸಮಯ ಬದುಕು ಯುವ ವೈದ್ಯರಿಗೆ ಸ್ಫೂರ್ತಿಯಾಗಬಹುದು ಎಂದರು.


ಮಾಜಿ ಸಚಿವರಾದ ರಮಾನಾಥ ರೈರವರು ಮಾತನಾಡಿ ಡಾ. ಅಬ್ದುಲ್ ಬಶೀರ್ ಓರ್ವ ಸಾಮಾಜಿಕ ಕಳಕಳಿಯ ವೈದ್ಯರಾಗಿದ್ದಾರೆ. ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಆರಂಭಿಸಿದ ಸಂಸ್ಥೆ ಇದಾಗಿದೆ. ಸಂಸ್ಥೆಯಲ್ಲಿ ಟ್ರೋಮೋ ಸೆಂಟರ್ ಆರಂಭಿಸಬೇಕು. ಪೈಪೋಟಿ ಇದ್ದಲ್ಲಿ ಯಶಸ್ಸು ಸಾಧ್ಯ. ಬಡವರಿಗೆ ಸಹಕಾರ ನೀಡುವ ನಿಮ್ಮ ಗುಣ ಅಭಿನಂದನೀಯ ಎಂದರು.

Join Whatsapp
Exit mobile version