Home ಕರಾವಳಿ ನಿಮ್ಮ ಗ್ಯಾರಂಟಿ ಗಳನ್ನು ಪಕ್ಕಕ್ಕಿಡಿ! ಹಿಜಾಬ್, ಸಮಾನನ್ಯಾಯ, ಸಮಾನತೆ, ಉದ್ಯೋಗದ ಭರವಸೆ ಕೊಡಿ. ನಿಮ್ಮಿಂದ ಸಾಧ್ಯವೇ?:...

ನಿಮ್ಮ ಗ್ಯಾರಂಟಿ ಗಳನ್ನು ಪಕ್ಕಕ್ಕಿಡಿ! ಹಿಜಾಬ್, ಸಮಾನನ್ಯಾಯ, ಸಮಾನತೆ, ಉದ್ಯೋಗದ ಭರವಸೆ ಕೊಡಿ. ನಿಮ್ಮಿಂದ ಸಾಧ್ಯವೇ?: ರಿಯಾಝ್ ಫರಂಗಿಪೇಟೆ ಪ್ರಶ್ನೆ

ಉಳ್ಳಾಲ: ನಿಮ್ಮ ಗ್ಯಾರಂಟಿಗಳನ್ನು ಪಕ್ಕಕ್ಕಿಡಿ! ಹಿಜಾಬ್, ಸಮಾನನ್ಯಾಯ, ಸಮಾನತೆ, ಉದ್ಯೋಗದ ಭರವಸೆ ಕೊಡಿ. ನಿಮ್ಮಿಂದ ಸಾಧ್ಯವೇ? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದ್ದಾರೆ.

SDPI ತಲಪಾಡಿ ಗ್ರಾಮ ಸಮಿತಿ ಪಂಜಲದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅವರು, ಒಂದು ಕಡೆ ನಿರಂತರವಾಗಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಕೊಲೆ, ಸುಲಿಗೆ, ಹಲ್ಲೆಗಳನ್ನೇ ಮುಖ್ಯ ಅಜೆಂಡಾವಾಗಿಸಿದ ಬಿಜೆಪಿ ಪಕ್ಷ, ಇನ್ನೊಂದು ಕಡೆ ಗ್ಯಾರಂಟಿ ಎಂಬ ಬೊಂಬೆಯನ್ನು ತೋರಿಸಿ, ಅಭಿವೃದ್ದಿಯ ಬ್ಯಾನರ್ ಹಾಕುತ್ತಾ ಕ್ಷೇತ್ರವನ್ನೇ ಅಭಿವೃದ್ದಿ ಶೂನ್ಯ ಮಾಡಿದ ಕಾಂಗ್ರೆಸ್ ಪಕ್ಷ, ಈ ಎರಡೂ ಪಕ್ಷಗಳನ್ನು ಕ್ಷೇತ್ರದ ಬುದ್ದಿವಂತ ಜನರು ದೂರವಿಡಬೇಕಾಗಿದ್ದು, ಜನತೆಗೆ ಸಂಪೂರ್ಣವಾಗಿ ಪ್ರಶ್ನಿಸುವಂತಹ ಅಧಿಕಾರವನ್ನು ನೀಡಿ ನ್ಯಾಯ ಪಾಲನೆಯ ಶೇಕಡಾ ನೂರರಷ್ಟು ಭರವಸೆ ನೀಡುತ್ತಿರುವ SDPI ಪಕ್ಷವನ್ನು ಜನರು ಉಳ್ಳಾಲ ಕ್ಷೇತ್ರದಲ್ಲಿ ಆಶೀರ್ವದಿಸಬೇಕು ಎಂದು ಜನರಲ್ಲಿ ವಿನಂತಿಸಿದರು.

ಪ್ರಶ್ನಿಸಲ್ಪಡುವ ಜನತೆ ನೀವಾಗಬೇಕು, ಅದು ಯಾರಾದರೂ ಸರಿ ರಿಯಾಝ್ ಫರಂಗಿಪೇಟೆ ಯಾದರೂ ಸರಿ. ಇಲ್ಲದಿದ್ದಲ್ಲಿ ಮತ್ತೆ ಜನತೆ ಗುಲಾಮಗಿರಿಗೆ ತಲಪುತ್ತೀರಿ ಎಂಬ ಸಂದೇಶವನ್ನು ಜನತೆಗೆ ಅವರು ನೀಡಿದರು.

ಗೊಡ್ಡು ಬೆದರಿಕೆಗೆ ಜಗ್ಗುವವರು ಎಂದಿಗೂ SDPI ಪಕ್ಷದ ಕಾರ್ಯಕರ್ತರಾಗಲು ಸಾದ್ಯವಿಲ್ಲ. ಪ್ರತಿರೋಧದ ಶಕ್ತಿಯೊಂದಿಗೆ (resistance power) ಯುವಕರು ಮುಂದೆ ಬರಬೇಕು ಎಂದು ರಿಯಾಝ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಕೀಲ್ ಕೆ ಸಿ ರೋಡ್ ವಹಿಸಿದರೆ, SDPI ಮಂಗಳೂರು ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಸಲಾಂ ವಿದ್ಯಾನಗರ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇನ್ನೋರ್ವ ಮುಖ್ಯ ಅತಿಥಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಸಮಾರೋಪ ಭಾಷಣವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ SDPI ಪಂಜಾಲ ಇದರ ವತಿಯಿಂದ ರಿಯಾಝ್ ಫರಂಗಿಪೇಟೆ ಹಾಗೂ ಇರ್ಶಾದ್ ಅಜ್ಜಿನಡ್ಕ ಇವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ SDPI ನಾಯಕರಾದ ಅಸಿಫ್ ಕೆ ಸಿ ರೋಡ್, ಕಾಸಿಂ ಮಾದವಪುರ, ಬಶೀರ್ ಪಿಲಿ ಕೂರ್, ಸತ್ತಾರ್ ಮಕ್ಯರ್, ಯಹ್ಯ ಪಂಜಾಳ, ಅಬ್ದುಲ್ಲಾ ಪಂಜಳ, ಕಲೀಲ್ ಪಂಜಳ, ಶರೀಫ್ ಪಿಲಿಕೂರ್ ಉಪಸ್ಥಿತರಿದ್ದರು.

Join Whatsapp
Exit mobile version