ಬೆಂಗಳೂರು: ಚುನಾವಣಾ ಬಾಂಡ್ ಲೂಟಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಮ್ಮಿಕೊಂಡ X ಅಭಿಯಾನ ಇಂದು ಕರ್ನಾಟಕದ ಟ್ರೆಂಡಿಂಗ್ ನಲ್ಲಿ ಮೊದಲೇ ಸ್ಥಾನ ಪಡೆದಿತ್ತು.
ಮೋದಿ ಸರ್ಕಾರ ಚುನಾವಣಾ ಬಾಂಡ್ ಮೂಲಕ ಮಾಡಿರುವ ಅಕ್ರಮ ಮತ್ತು ಲೂಟಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷ ದಿನಾಂಕ 21 ಮಾರ್ಚ್ 2024 ರಂದು ಸಾಮಾಜಿಕ ಜಾಲತಾಣ “X” ನಲ್ಲಿ #ModiKaBondScam ಮತ್ತು #ElectoralBondScam ಹೆಸರಿನಲ್ಲಿ ಅಭಿಯಾನ ಹಮ್ಮಿಕೊಂಡಿತ್ತು.
ಈ ಅಭಿಯಾನ ಸಾಕಷ್ಟು ಜನರ ಗಮನ ಸೆಳೆಯುವ ಮೂಲಕ ಇಂದು “X” ನಲ್ಲಿ ಕರ್ನಾಟಕದ ಟ್ರೆಂಡಿಂಗ್ ನಲ್ಲಿ ಮೊದಲೇ ಸ್ಥಾನ ಪಡೆದಿತ್ತು.