Home ಟಾಪ್ ಸುದ್ದಿಗಳು 6ನೇ ತರಗತಿಯಲ್ಲಿ ಬೌದ್ಧ, ಜೈನ ಧರ್ಮಗಳ ಉದಯ ಕುರಿತ ಪಾಠ ಬೋಧಿಸದಂತೆ ಸೂಚನೆ | ವ್ಯಾಪಕ...

6ನೇ ತರಗತಿಯಲ್ಲಿ ಬೌದ್ಧ, ಜೈನ ಧರ್ಮಗಳ ಉದಯ ಕುರಿತ ಪಾಠ ಬೋಧಿಸದಂತೆ ಸೂಚನೆ | ವ್ಯಾಪಕ ಆಕ್ರೋಶ

ಬೆಂಗಳೂರು : 2020-21ನೇ ಸಾಲಿನ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ 7ನೇ ಪಾಠ ‘ಹೊಸ ಧರ್ಮಗಳ ಉದಯ’ ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತ ಸುತ್ತೋಲೆಯ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಈ ಅಧ್ಯಾಯ ಬೋಧಿಸದಂತೆ ನಿರ್ದೇಶಿಸಿರುವ ಸರಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

6ನೇ ತರಗತಿ ಸಮಾಜ ವಿಜ್ಞಾನ ಭಾಗ 1ರಲ್ಲಿನ ಪಾಠ-7ರಲ್ಲಿ ಹೊಸ ಧರ್ಮಗಳ ಉದಯ ಪಾಠವಿದೆ. ಪಾಠ ಪುಸ್ತಕದ ಪುಟ ಸಂಖ್ಯೆ 82 ಮತ್ತು 83ರಲ್ಲಿನ ವಿಷಯಾಂಶಗಳನ್ನು 2021-21ನೇ ಶೈಕ್ಷಣಿಕ ಸಾಲಿಗೆ ಬೋಧನೆ/ಕಲಿಕೆ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಸಂಬಂಧಿಸಿದ ಎಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಲು ಶಿಕ್ಷಣ ಇಲಾಖೆ ತಿಳಿಸಿದ್ದು, ಇದರ ಕುರಿತು ಕೈಗೊಂಡ ಕ್ರಮಗಳನ್ನು ಫೆ.28ರೊಳಗೆ ವರದಿ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.

‘ಹೊಸ ಧರ್ಮಗಳ ಉದಯ’ ಪಾಠದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮದ ಕುರಿತು ಪ್ರಸ್ತಾಪಿಸಲಾಗಿದೆ. ಈ ಕುರಿತ ಪಾಠವನ್ನು ಬೋಧಿಸದಂತೆ ಸೂಚಿಸಲಾಗಿದೆ ಎನ್ನಲಾಗಿದೆ.  

Join Whatsapp
Exit mobile version