Home ಟಾಪ್ ಸುದ್ದಿಗಳು ಕೇರಳದ ಮೊದಲ ಮಹಿಳಾ ಫುಟ್ಬಾಲ್ ಆಟಗಾರ್ತಿ ಫೌಝಿಯಾ ಮಾಂಬಟ್ಟಾ ನಿಧನ

ಕೇರಳದ ಮೊದಲ ಮಹಿಳಾ ಫುಟ್ಬಾಲ್ ಆಟಗಾರ್ತಿ ಫೌಝಿಯಾ ಮಾಂಬಟ್ಟಾ ನಿಧನ

ಕ್ಯಾಲಿಕಟ್ : ಕೇರಳದ ಮೊದಲ ಮಹಿಳಾ ಫುಟ್ಬಾಲ್ ಆಟಗಾರ್ತಿ ಮತ್ತು ತರಬೇತುದಾರೆ ಫೌಝಿಯಾ ಮಾಂಬಟ್ಟಾ (52) ಇಂದು ನಿಧನರಾಗಿದ್ದಾರೆ. ಅವರು ನಡಕ್ಕಾವು ಶಾಲೆಯಲ್ಲಿ ತರಬೇತುದಾರೆಯಾಗಿ ಕೆಲಸ ಮಾಡುತ್ತಿದ್ದರು. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು 35 ವರ್ಷಗಳಿಂದ ಆಟಗಾರ್ತಿಯಾಗಿ ಮತ್ತು ತರಬೇತುದಾರೆಯಾಗಿ ಸಕ್ರಿಯರಾಗಿದ್ದರು.

ಅವರು ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದಲ್ಲಿ ಕೇರಳದ ಗೋಲ್‌ಕೀಪರ್ ಆಗಿದ್ದರು. 2003 ರಲ್ಲಿ ಅವರು ಕ್ಯಾಲಿಕಟ್ ನಡಕ್ಕಾವ್ ಶಾಲೆಯ ಫುಟ್ಬಾಲ್ ತಂಡದ ತರಬೇತುದಾರೆಯಾದರು. 2005 ರಿಂದ 2007 ರವರೆಗೆ ಅವರು ರಾಜ್ಯ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ಪಂದ್ಯಾವಳಿಗಳಲ್ಲಿ ರನ್ನರ್ ಅಪ್ ಪಡೆದ ಕ್ಯಾಲಿಕಟ್ ತಂಡಕ್ಕೆ ತರಬೇತುದಾರೆಯಾಗಿದ್ದರು. 2005 ರಲ್ಲಿ ಮಣಿಪುರದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕೇರಳ ಮೂರನೇ ಸ್ಥಾನ ಪಡೆದಾಗ ಅವರು ತಂಡದ ತರಬೇತುದಾರೆಯಾಗಿದ್ದರು.  2006 ರಲ್ಲಿ ಒಡಿಶಾದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ಸ್ ಅಪ್ ಆಗಿದ್ದ ಕೇರಳ ತಂಡದಲ್ಲಿ ಫೌಜಿಯಾ ಸಹಾಯಕ ಕೋಚ್ ಆಗಿದ್ದರು.

Join Whatsapp
Exit mobile version