Home ಟಾಪ್ ಸುದ್ದಿಗಳು ಹೊಸ ಗೌಪ್ಯತೆ ನೀತಿ । ವಾಟ್ಸಪ್, ಫೇಸ್ ಬುಕ್ ಗೆ ಸುಪ್ರೀಂ ಕೋರ್ಟ್ ನೋಟಿಸ್

ಹೊಸ ಗೌಪ್ಯತೆ ನೀತಿ । ವಾಟ್ಸಪ್, ಫೇಸ್ ಬುಕ್ ಗೆ ಸುಪ್ರೀಂ ಕೋರ್ಟ್ ನೋಟಿಸ್

ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಪ್ ನ ಹೊಸ ಗೌಪ್ಯತೆ ನೀತಿಯ ಕುರಿತು ಸುಪ್ರೀಂ ಕೋರ್ಟ್ ಫೇಸ್‌ ಬುಕ್ ಮತ್ತು ವಾಟ್ಸಪ್ ಗೆ ನೋಟಿಸ್ ನೀಡಿದೆ. ಹೊಸ ವಾಟ್ಸಪ್ ಗೌಪ್ಯತೆ ನೀತಿಯನ್ನು ಜಾರಿಗೊಳಿಸಿದರೆ ಜನರ ಗೌಪ್ಯತೆ ಕಾಪಾಡಲು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಕಂಪನಿಯ ಹೊಸ ಗೌಪ್ಯತೆ ನೀತಿಯನ್ನು ಪ್ರಶ್ನಿಸುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಸಾಮಾಜಿಕ ಮಾಧ್ಯಮ ಕಂಪನಿಗಳಾದ ವಾಟ್ಸಪ್ ಮತ್ತು ಅದರ ಮೂಲ ಕಂಪನಿ ಫೇಸ್‌ ಬುಕ್‌ ಗೆ ನೋಟಿಸ್ ನೀಡಿದೆ.

ಹೊಸ ಗೌಪ್ಯತೆ ನೀತಿಯನ್ನು ತಂದು ಫೆಬ್ರವರಿ 5 ರಿಂದ ಜಾರಿಗೆ ತರುವುದಾಗಿ ವಾಟ್ಸಾಪ್ ಈ ಹಿಂದೆ ಘೋಷಿಸಿತ್ತು. ಆದರೆ ಸರ್ಕಾರದ ಸೂಚನೆಯ ನಂತರ ಅದನ್ನು ಮೇ 14 ಕ್ಕೆ ವಿಸ್ತರಿಸಲಾಗಿದೆ. ವಾಟ್ಸಾಪ್‌ ನ ಹೊಸ ಗೌಪ್ಯತೆ ನೀತಿ ಭಾರತ ಮತ್ತು ಯುರೋಪಿಗೆ ವಿಭಿನ್ನವಾಗಿದೆ.

“ನೀವು (ಫೇಸ್‌ಬುಕ್ ಮತ್ತು ವಾಟ್ಸಾಪ್) 2-3 ಟ್ರಿಲಿಯನ್ ಕಂಪನಿಯಾಗಿರಬಹುದು, ಆದರೆ ಜನರು ತಮ್ಮ ಗೌಪ್ಯತೆಯನ್ನು ಹಣಕ್ಕಿಂತ ಹೆಚ್ಚು ಗೌರವಿಸುತ್ತಾರೆ” ಎಂದು ಸುಪ್ರೀಂ ಕೋರ್ಟ್ ನೋಟಿಸ್ ನೀಡುವಾಗ ಫೇಸ್‌ ಬುಕ್ ಮತ್ತು ವಾಟ್ಸಾಪ್‌ ಗೆ ತಿಳಿಸಿದೆ.

ಕೇಂದ್ರ ಸರಕಾರ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಕೇಂದ್ರ ಸರಕಾರ ಕೂಡ ವಾಟ್ಸಪ್ ಗೆ ವಿಷಯಕ್ಕೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸಿದೆ.

Join Whatsapp
Exit mobile version