Home ಟಾಪ್ ಸುದ್ದಿಗಳು ಮುಸ್ಲಿಮ್ ಯುವತಿಯ ಮೇಲೆ ಹಿಂದುತ್ವ ಗುಂಪಿನಿಂದ ದಾಳಿ | ಸಂತ್ರಸ್ತರ ಮೇಲೆಯೇ ಕೇಸು ದಾಖಲು!

ಮುಸ್ಲಿಮ್ ಯುವತಿಯ ಮೇಲೆ ಹಿಂದುತ್ವ ಗುಂಪಿನಿಂದ ದಾಳಿ | ಸಂತ್ರಸ್ತರ ಮೇಲೆಯೇ ಕೇಸು ದಾಖಲು!

ನವದೆಹಲಿ : ಬಾಲ್ಯದಲ್ಲಿ ಚಹಾ ಮಾರುತ್ತಿದ್ದೆ ಎಂದು ನಂಬಿಸಿ ಪ್ರಧಾನಿಯ ಆಡಳಿತವಿರುವ ದೇಶದಲ್ಲಿ, ಯುವತಿಯೊಬ್ಬಳು ಯಶಸ್ವಿಯಾಗಿ ಚಹಾ ಅಂಗಡಿ ನಡೆಸುತ್ತಿದ್ದಾಳೆಂಬ ಕಾರಣಕ್ಕಾ ದಾಳಿ ನಡೆಸಲಾಗಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಬಿಜೆಪಿ ಬೆಂಬಲಿಗ ಸಂಘಟನೆ ‘ಹಿಂದೂ ಜಾಗರಣ್ ಮಂಚ್’ ಗೆ ಸೇರಿದ ಗುಂಪೊಂದು 23ರ ಹರೆಯದ ಮುಸ್ಲಿಂ ಯುವತಿ ಆರ್ಷಿ ಎಂಬಾಕೆಯ ಮೇಲೆ ದಾಳಿ ನಡೆಸಿದೆ.

ಚಹಾ, ಮಿಠಾಯಿ ಮಾರಾಟ ಮಾಡುವ ಅಂಗಡಿಯಿಟ್ಟುಕೊಂಡಿರುವ ಆರ್ಷಿ, ಪಕ್ಕದ ಅಂಗಡಿಯಾತನಿಗಿಂತ ಚೆನ್ನಾಗಿ ವ್ಯಾಪಾರ ಮಾಡುತ್ತಾಳೆ ಎಂಬ ಕಾರಣಕ್ಕಾಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಆಕೆಯ ಸ್ನೇಹಿತರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

“ಆಕೆ ಎರಡು ತಿಂಗಳ ಹಿಂದೆ ಚಹಾದ ಅಂಗಡಿ ಆರಂಭಿಸಿದ್ದಳು. ಆಕೆ ತನ್ನ ಅಂಗಡಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದಳು. ಹೀಗಾಗಿ ಗ್ರಾಹಕರು ಆಕೆಯ ಅಂಗಡಿಯತ್ತ ಹೆಚ್ಚೆಚ್ಚು ಬರಲಾರಂಭಿಸಿದ್ದರು. ಇದರಿಂದ ಆಕೆಗೆ ವ್ಯಾಪಾರ ಚೆನ್ನಾಗಿ ಆಗುತಿತ್ತು” ಎಂದು ಆಕೆ ಸ್ನೇಹಿತರು ಹೇಳಿದ್ದಾರೆ.  

ಪಕ್ಕದ ಅಂಗಡಿಯಾತ ಆತನಿಗೆ ಕಿರುಕುಳ ನೀಡಲಾರಂಭಿಸಿದ್ದ ಮತ್ತು ತನಗಾದ ನಷ್ಟಕ್ಕೆ ಹಣ ಕೊಡುವಂತೆ ಪೀಡಿಸಲಾರಂಭಿಸಿದ್ದ ಎನ್ನಲಾಗಿದೆ. ಆಕೆಯ ತಲೆಗೆ ಗಂಭೀರ ಏಟು ತಗುಲಿದೆ, ಆಸ್ಪತ್ರೆಗೆ ದಾಖಲಾಗಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆದರೆ, ಪೊಲೀಸರು ಆರ್ಷಿ ಮತ್ತು ಆಕೆಯ ಸ್ನೇಹಿತರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ತಮ್ಮ ವಿರೋಧಿಗಳ ಕಡೆಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಮತ್ತು ಹಲ್ಲೆ ಮಾಡಲಾಗಿದೆ ಎಂದು ಆರ್ಷಿ ಮತ್ತು ಆಕೆಯ ಸ್ನೇಹಿತರ ಮೇಲೆ ದೂರು ದಾಖಲಾಗಿದೆ.

ವಿಷಯ ಸುದ್ದಿಯಾಗುತ್ತಿದ್ದಂತೆ, ದೆಹಲಿ ಗೇಟ್ ಪೊಲೀಸ್ ಠಾಣೆಯಲ್ಲಿ ಆರ್ಷಿ ಕುಟುಂಬಸ್ಥರು ನೀಡಿರುವ ದೂರಿನ ಆಧಾರದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಮೀರತ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version