Home ಟಾಪ್ ಸುದ್ದಿಗಳು ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ: ಇಂಡಿಯನ್ ಸೋಷಿಯಲ್ ಫೋರಂನಿಂದ ರಕ್ತದಾನ ಶಿಬಿರ

ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ: ಇಂಡಿಯನ್ ಸೋಷಿಯಲ್ ಫೋರಂನಿಂದ ರಕ್ತದಾನ ಶಿಬಿರ

ತಾಯಿಫ್: ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ ಪ್ರಯುಕ್ತ  ಇಂಡಿಯನ್ ಸೋಷಿಯಲ್ ಫೋರಂ ತಾಯಿಫ್  ಘಟಕದ ವತಿಯಿಂದ ಬೃಹತ್ ರಕ್ತದಾನ ಶಿಬಿರವು ತಾಯಿಫ್ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಜರುಗಿತು.

 ರಕ್ತದಾನ ಶಿಬಿರದಲ್ಲಿ ವಿಶೇಷ ಅತಿಥಿಗಳಾಗಿ ಜೆದ್ದಾ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜನಾಬ್ ಫಿರೋಝ್ ಜೆದ್ದಾ  ಆಗಮಿಸಿದ್ದರು. ಹಲವಾರು ದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ಡಾ. ಅಮೀನ್, ಡಾ.ಮನಾಫ್ ಹಾಗೂ ಡಾ.ಆಲೀ  ಈ ಕಾರ್ಯಕ್ರಮದಲ್ಲಿ ವೈದ್ಯರುಗಳಾಗಿ ಸಹಕರಿಸಿದರು. ಜನಾಬ್ ಮಲಿಕ್ ಇಡ್ಯ ಧನ್ಯವಾದ ಸಮರ್ಪಿಸಿದರು. ಕೊನೆಯಲ್ಲಿ ಇಂಡಿಯನ್ ಸೋಷಿಯಲ್ ಫೋರಂ ತಾಯಿಫ್ ಘಟಕದ ಅಧ್ಯಕ್ಷ ಜನಾಬ್ ಸಾಜಿದ್ ಗಂಜಿಮಠ ಅತಿಥಿಗಳಿಗೆ ಹಾಗೂ ವೈದ್ಯರನ್ನು ಹೂಗುಚ್ಛ ನೀಡಿ ಗೌರವಿಸಿದರು.

Join Whatsapp
Exit mobile version