Home ಟಾಪ್ ಸುದ್ದಿಗಳು ವಿಧಾನಸಭೆ ಸಚೇತಕರಾಗಿ ಅಶೋಕ್ ಪಟ್ಟಣ, ಪರಿಷತ್’ಗೆ ಸಲೀಂ ಅಹ್ಮದ್ ನೇಮಕ

ವಿಧಾನಸಭೆ ಸಚೇತಕರಾಗಿ ಅಶೋಕ್ ಪಟ್ಟಣ, ಪರಿಷತ್’ಗೆ ಸಲೀಂ ಅಹ್ಮದ್ ನೇಮಕ

ಬೆಂಗಳೂರು: ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ಶಾಸಕ ಅಶೋಕ ಪಟ್ಟಣ ಅವರು ನೇಮಕಗೊಂಡಿದ್ದಾರೆ. ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ, ಹಿರಿಯ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇಂದು ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರ ಆಯ್ಕೆಯನ್ನು ಘೋಷಿಸಿದೆ.

Join Whatsapp
Exit mobile version