Home ಕರಾವಳಿ ದ.ಕ. | ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ದ್ವಿತೀಯ ಬಾರಿಗೆ ಗದ್ದುಗೆ ಏರಿದ SDPI

ದ.ಕ. | ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ದ್ವಿತೀಯ ಬಾರಿಗೆ ಗದ್ದುಗೆ ಏರಿದ SDPI

ಮಂಗಳೂರು : ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಇಂದು ನಡೆದಿದೆ. ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷೆಯಾಗಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಫೌಝಿಯಾ ಬಾನು, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಎಸ್.ಎನ್. ಆಯ್ಕೆಯಾಗಿದ್ದಾರೆ.

ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ ಎಂಟು ಸ್ಥಾನಗಳನ್ನು ಎಸ್ ಡಿಪಿಐ ಬೆಂಬಲಿತರು ಗೆಲ್ಲುವ ಮೂಲಕ ಪೂರ್ಣ ಬಹುಮತ ಸಾಧಿಸಿದ್ದರು. ಇಲ್ಲಿ ಒಟ್ಟು ಎಸ್ ಡಿಪಿ 8, ಕಾಂಗ್ರೆಸ್ 4, ಬಿಜೆಪಿ 3 ಅಭ್ಯರ್ಥಿಗಳು ಗೆದ್ದಿದ್ದರು.

ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಂತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಲತೀಫ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಬೆಂಬಲಿತರಿಂದ ಅಧ್ಯಕ್ಷ ಸ್ಥಾನಕ್ಕೆ ಸೆಲಿಕಾ ಬಾನು ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ.

ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ಕಳೆದ ಬಾರಿಯೂ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಗ್ರಾಮಸ್ಥರು, ಎಸ್ ಡಿಪಿಐ ಬೆಂಬಲಿತ ಸದಸ್ಯರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಸಜೀಪನಡುವಿನಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಏಳು ಸ್ಥಾನಗಳನ್ನು ಪಡೆದಿದ್ದರು. ಕಳೆದ ಅವಧಿಗೆ ಅಧ್ಯಕ್ಷರಾಗಿ ಎಸ್ ಡಿಪಿಐಯ ಮುಹಮ್ಮದ್ ನಾಸಿರ್ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್ – ಬಿಜೆಪಿ ಮೈತ್ರಿ ಅಭ್ಯರ್ಥಿ ಸುನೀತಾ ಶಾಂತಿ ಮೊರಾಸ್ ಆಯ್ಕೆಯಾಗಿದ್ದರು.

Join Whatsapp
Exit mobile version