ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಪೌರತ್ವವನ್ನು ತ್ಯಜಿಸಿದ ಭಾರತೀಯರೆಷ್ಟು?

Prasthutha|

- Advertisement -

ಹೊಸದಿಲ್ಲಿ : ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ 6,76,074 ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳಲ್ಲಿ ಪೌರತ್ವವನ್ನು ಸ್ವೀಕರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಲೋಕಸಭೆಯಲ್ಲಿ ಶಿವಗಂಗ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಕೇಂದ್ರ ಗೃಹ ಸಹ ಸಚಿವ ನಿತ್ಯಾನಂದ ರೋಯ್ ಅವರು ಲಿಖಿತ ಉತ್ತರದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

2015 ರಿಂದ 2019 ರವರೆಗೆ ಸತತ ಐದು ವರ್ಷಗಳ ಅವಧಿಯಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದವರ ಸಂಖ್ಯೆ ಕ್ರಮವಾಗಿ 1,41,656 (2015), 1,44,942 (2016), 1,27,905 (2017), 1,25,130 (2018) ಮತ್ತು 1,36,441 (2019) . ಒಟ್ಟು 1,24,99,395 ಭಾರತೀಯ ಪ್ರಜೆಗಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಉಭಯ ಪೌರತ್ವಕ್ಕಾಗಿ ಯಾವುದೇ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ. 2020 ರ ವೇಳೆಗೆ ಒಟ್ಟು 1,91,609 ವಿದೇಶಿಯರನ್ನು ಒಸಿಐ ಕಾರ್ಡ್ ಹೊಂದಿರುವವರಾಗಿ ನೋಂದಾಯಿಸಲಾಗಿದೆ ಎಂದು ಓವರ್‌ಸೀಸ್ ಸಿಟಿಝನ್ ಆಫ್ ಇಂಡಿಯಾ(ಒಸಿಐ) ವನ್ನು ಉಲ್ಲೇಖಿಸಿ ಸಚಿವಾಲಯ ತಿಳಿಸಿದೆ.

Join Whatsapp
Exit mobile version