Home ಟಾಪ್ ಸುದ್ದಿಗಳು ಮತ್ತೆ ಪಾತಾಳಕ್ಕಿಳಿದ ರೂಪಾಯಿ ಮೌಲ್ಯ: ಇತಿಹಾಸದಲ್ಲೇ ಮೊದಲ ಬಾರಿ ದಾಖಲೆಯ ಕುಸಿತ

ಮತ್ತೆ ಪಾತಾಳಕ್ಕಿಳಿದ ರೂಪಾಯಿ ಮೌಲ್ಯ: ಇತಿಹಾಸದಲ್ಲೇ ಮೊದಲ ಬಾರಿ ದಾಖಲೆಯ ಕುಸಿತ

ನವದೆಹಲಿ: ಜಾಗತಿಕವಾಗಿ ವಿವಿಧ ಷೇರುಪೇಟೆಗಳಲ್ಲಿ ಕಂಡುಬಂದ ತಲ್ಲಣದಿಂದ ಭಾರತದಲ್ಲೂ ಸುಮಾರು 800 ಕಂಪನಿಗಳ ಷೇರುಗಳ ಮೌಲ್ಯ ಏರುಗತಿಗೆ ಹೋದರೆ ಅದಕ್ಕಿಂತ ಎರಡು ಪಟ್ಟು ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡಿದ್ದು ರೂಪಾಯಿಗಳ ಮೌಲ್ಯಕ್ಕೆ  ದಾಖಲೆ ಲೆಕ್ಕದಲ್ಲಿ ಕುಸಿತ ಕಂಡುಬಂದಿದೆ.

ಭಾರತದ ಷೇರುಪೇಟೆ ಕುಸಿತದ ಜೊತೆಗೆ ಮತ್ತೊಂದು ದೊಡ್ಡ ಶಾಕ್ ಹೊಡೆದಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಪ್ರತೀ ಡಾಲರ್‌ಗೆ ರೂಪಾಯಿ ಮೌಲ್ಯ 77.40ಕ್ಕೆ ಇಳಿದಿದೆ.

ಕಳೆದ ಶುಕ್ರವಾರದಂದು ಒಂದು ಡಾಲರ್ ಗೆ 77.05 ರೂಪಾಯಿಯಂತೆ ವಹಿವಾಟು ಆಗಿತ್ತು. ಸೋಮವಾರ ರೂಪಾಯಿಗೆ ಇನ್ನೂ ಹೆಚ್ಚು ಹಿನ್ನಡೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಡಾಲರ್ ಎದುರು ಇಷ್ಟು ಮಟ್ಟಕ್ಕೆ ಕುಸಿತ ಕಂಡಿರುವುದು ಎಂದು ತಿಳಿದು ಬಂದಿದೆ.

Join Whatsapp
Exit mobile version