ನವದೆಹಲಿ: ವಿವಾದಿತ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆಯ ಕೇಂದ್ರವಾಗಿದ್ದ ಶಾಹೀನ್ ಬಾಗ್ ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ ಡಿಎಂಸಿ) ಇಂದು ಅತಿಕ್ರಮಣ ತೆರವು ಅಭಿಯಾನವನ್ನು ಆರಂಭಿಸಿದ್ದು, ಸ್ಥಳೀಯರು ತೀವ್ರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ತೆರವು ಕಾರ್ಯಾಚರಣೆಯ ವಿರುದ್ಧ ಸಿಆರ್ ಪಿಎಫ್ ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲು ಪ್ರಾರಂಭಿಸುತ್ತಿದ್ದಂತೆ ಸ್ಥಳೀಯರು ರಸ್ತೆಗಳಲ್ಲಿ ಕುಳಿತು ಅಭಿಯಾನಕ್ಕಾಗಿ ತಂದಿದ್ದ ಬುಲ್ಡೋಜರ್ ಗಳನ್ನು ತಡೆಯಲು ಪ್ರಯತ್ನಿಸಿದರು.
ಮೊದಲು ಅವರಿಗೆ ನೋಟಿಸ್ ಕಳುಹಿಸಿ ಮತ್ತು ಅವರಿಗೆ ಸಮಯ ನೀಡಿ. ನಾನು ಈ ಬಗ್ಗೆ ಉನ್ನತ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಪರ್ವೇಝ್ ಆಲಂ ಹೇಳಿದರು.
ಮೋದಿ ಸರ್ಕಾರ್ ಮುರ್ದಾಬಾದ್ ಘೋಷಣೆಗಳು ಎಲ್ಲೆಡೆ ಕೇಳಿಬಂತು.
ಇಂದು ಬೆಳಗ್ಗೆ ದೆಹಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಭದ್ರತೆಯನ್ನು ಒದಗಿಸಿದರು.