Home ಕರಾವಳಿ ವನಿತಾ ಪಾರ್ಕ್ ಅಭಿವೃದ್ಧಿಗೆ 35 ಲಕ್ಷ ರೂ. ಬಿಡುಗಡೆ: ವೇದವ್ಯಾಸ ಕಾಮತ್ ಭರವಸೆ

ವನಿತಾ ಪಾರ್ಕ್ ಅಭಿವೃದ್ಧಿಗೆ 35 ಲಕ್ಷ ರೂ. ಬಿಡುಗಡೆ: ವೇದವ್ಯಾಸ ಕಾಮತ್ ಭರವಸೆ

ಮಂಗಳೂರು: ವನಿತಾ ಪಾರ್ಕ್ ಅಭಿವೃದ್ಧಿಗೆ ರೂ.35 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ಸಹಭಾಗಿತ್ವದಲ್ಲಿ ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಇವರು ಕೊಡುಗೆಯಾಗಿ ನೀಡಿರುವ ಧ್ವನಿ ವರ್ಧಕ ಹಸ್ತಾಂತರ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಹ್ಯಾಟ್’ ಹಿಲ್’ನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ( ವನಿತಾ ಪಾರ್ಕ್ )ಉದ್ಘಾಟಿಸಿ ಮಾತನಾಡುತ್ತಿದ್ದರು.

ನಗರದ ಏಕೈಕ ವನಿತಾ ಪಾರ್ಕ್ ಅನ್ನು ಮಾದರಿ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಲು ಮಹಾನಗರ ಪಾಲಿಕೆಯ ಜೊತೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಅತಿಥಿಗಳಾಗಿ ಉಪ ಮೇಯರ್ ಪೂರ್ಣಿಮಾ, ಮಂಗಳೂರು ಮಹಾನಗರ ಪಾಲಿಕೆ ಸಂಧ್ಯಾ ಆಚಾರ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ,ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಅಧ್ಯಕ್ಷೆ ವಸಂತಿ ಕಾಮತ್ , ಕಾರ್ಯದರ್ಶಿ ಗೀತಾ ಬಿ ರೈ ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಇನ್ನರ್ ವೀಲ್’ಕ್ಲಬ್’ ಪೂರ್ವ ಜಿಲ್ಲಾ ಅಧ್ಯಕ್ಷೆ ಮಿತ್ರಾ ಪ್ರಭು ಸ್ವಾಗತಿಸಿ, ವಂದಿಸಿದರು.

Join Whatsapp
Exit mobile version