Home ಟಾಪ್ ಸುದ್ದಿಗಳು ರಾಮನವಮಿ ಶೋಭಾಯಾತ್ರೆಯ ನೆಪದಲ್ಲಿ ಗಲಭೆ: 2.9 ಲಕ್ಷ ರೂ. ಪರಿಹಾರ ಮೊತ್ತ ಪಾವತಿಸುವಂತೆ ಬಾಲಕನಿಗೆ ನೋಟಿಸ್;...

ರಾಮನವಮಿ ಶೋಭಾಯಾತ್ರೆಯ ನೆಪದಲ್ಲಿ ಗಲಭೆ: 2.9 ಲಕ್ಷ ರೂ. ಪರಿಹಾರ ಮೊತ್ತ ಪಾವತಿಸುವಂತೆ ಬಾಲಕನಿಗೆ ನೋಟಿಸ್; ಕಂಗೆಟ್ಟ ಕುಟುಂಬ

ಭೋಪಾಲ್: ರಾಮನವಮಿ ಶೋಭಾಯಾತ್ರೆಯ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಉಂಟಾದ ನಾಶ ನಷ್ಟವನ್ನು ಸರಿದೂಗಿಸುವ ಸಲುವಾಗಿ 2.9 ಲಕ್ಷ ರೂ. ಪರಿಹಾರ ಮೊತ್ತವನ್ನು ನೀಡುವಂತೆ ಬಾಲಕನೊಬ್ಬನಿಗೆ ರಾಜ್ಯ ಕ್ಲೇಮ್ ನ್ಯಾಯಾಧೀಕರಣ ನೋಟಿಸ್ ನೀಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್’ನಿಂದ ವರದಿಯಾಗಿದೆ.

ಮಧ್ಯಪ್ರದೇಶದ ಖಾರ್ಗೋನ್’ನಲ್ಲಿ ನಡೆದ ರಾಮನವಮಿ ಶೋಭಾಯಾತ್ರೆಯ ನೆಪದಲ್ಲಿ ಗಲಭೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಾಶ ನಷ್ಟ ಉಂಟಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಾಲಕ ಮತ್ತು ಕುಟುಂಬಕ್ಕೆ ನೋಟಿಸ್ ನೀಡಿದ್ದು, ಇದರಿಂದಾಗಿ ಬಡತನದಲ್ಲಿರುವ ಆ ಕುಟುಂಬದ ಸದಸ್ಯರು ಕಂಗೆಟ್ಟಿದೆ. ಅಲ್ಲದೆ ಬಾಲಕನ ತಂದೆಯೂ 4.8 ಲಕ್ಷ ರೂ. ಪರಿಹಾರದ ಮೊತ್ತ ನೀಡುವಂತೆ ರಾಜ್ಯ ಕ್ಲೇಮ್ ನ್ಯಾಯಾಧೀಕರಣ ನೋಟಿಸ್ ನೀಡಿದೆ.

ಬಾಲಕನ ತಂದೆ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ಜೀವನೋಪಾಯಕ್ಕಾಗಿ ಅನ್ಯ ಮಾರ್ಗವನ್ನು ಆಶ್ರಯಿಸಿಲ್ಲ ಎಂದು ಆತನ ತಂದೆ ಕಾಲೂ ಖಾನ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ನೀಡುವ ಸಾಮರ್ಥ್ಯ ನಮಗಿಲ್ಲ ಎಂದು ಆತನ ತಾಯಿ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version