Home ಕರಾವಳಿ ಸರಕಾರ ಹಠಮಾರಿತನ ಬಿಟ್ಟು ಸುರತ್ಕಲ್ ಅನಧಿಕೃತ ಟೋಲ್ ಗೇಟ್ ರದ್ದುಗೊಳಿಸಲಿ: SDTU

ಸರಕಾರ ಹಠಮಾರಿತನ ಬಿಟ್ಟು ಸುರತ್ಕಲ್ ಅನಧಿಕೃತ ಟೋಲ್ ಗೇಟ್ ರದ್ದುಗೊಳಿಸಲಿ: SDTU

ಮಂಗಳೂರು: ನಿಯಮಗಳನ್ನು ಮೀರಿ ನಡೆಸುತ್ತಿರುವ ಅನಧಿಕೃತ ಸುರತ್ಕಲ್ ಟೋಲ್ ಗೇಟ್ ಅನ್ನು ರದ್ದುಗೊಳಿಸಲು ವಿವಿಧ ಸಂಘಟನೆ ಮತ್ತು ಬಿಜೆಪಿಯೇತರ ರಾಜಕೀಯ ಪಕ್ಷದ ಸಮಾನ ಮನಸ್ಕರು ಆಗ್ರಹಿಸುತ್ತಿರುವಾಗ ಟೋಲ್ ರದ್ದತಿಯನ್ನು ಸರಕಾರ ಮುಂದೂಡುತ್ತಿರುವುದು ಹಠಮಾರಿತನ ಧೋರಣೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ ಆರೋಪಿಸಿದ್ದಾರೆ.

ಸರಕಾರ ನಾಗರಿಕ ಸಮಾಜದ ಒತ್ತಾಯವನ್ನು ಕಡೆಗಣಿಸಿದ ಕಾರಣದಿಂದ ಸರಕಾರದ ಹಠಮಾರಿತನವನ್ನು ವಿರೋಧಿಸಿ ಸಮಾನ ಮನಸ್ಕರೆಲ್ಲರೂ ನಾಗರಿಕರೊಂದಿಗೆ ಜೊತೆಗೂಡಿ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೀದಿಗೆ ಇಳಿದಿದ್ದಾರೆ. ಇದನ್ನು ಹತ್ತಿಕ್ಕಲು ಸರಕಾರ ಪೊಲೀಸರನ್ನು ಬಳಸಿದ್ದು, ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿ ಹೋರಾಟಗಾರರನ್ನು ಬಂಧಿಸಿದೆ. ಮಾತ್ರವಲ್ಲ ಪ್ರತಿಭಟನೆಯಿಂದ ಹಿಂದೆ ಸರಿಯಲು ಮುಖಂಡರಿಗೆ ಪೊಲೀಸರು 107 ಸೆಕ್ಷನ್ ಗಳಡಿಯಲ್ಲಿ ನೋಟಿಸ್ ನೀಡಿರುವುದು ಖಂಡನೀಯ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಆಡಳಿತ ವ್ಯವಸ್ಥೆ ಸರಿಯಿಲ್ಲದಿದ್ದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಲು ನಮ್ಮ ದೇಶದ ಸಂವಿಧಾನ ಅವಕಾಶ ನೀಡಿರುವಾಗ ನಿಯಮ ನಿಬಂಧನೆಗಳನ್ನು ಗಾಳಿಗೆ ತೂರಿ ಟೋಲ್ ಸಂಗ್ರಹಿಸುವುದರ ವಿರುದ್ಧ ಜನರು ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಹೋರಾಟ ಸಂಘಟಿಸಿದ್ದಾರೆ. ಆದರೆ ಪ್ರತಿಭಟನೆಯನ್ನು ದಮನಿಸುವ ಸರಕಾರದ ತಂತ್ರ ನಾಗರಿಕ ಸಮಾಜದ ಆಕ್ರೋಶಕ್ಕೆ ಠುಸ್ಸಾಗಿದೆ. ಇನ್ನಾದರೂ ಸರಕಾರ ನಾಗರಿಕ ಸಮಾಜ ವಿರೋಧಿಸುವ ನೀತಿಗಳನ್ನು ಗೌರವಿಸಲಿ ಮತ್ತು ಸುರತ್ಕಲ್ ಟೋಲ್ ಅನ್ನು ರದ್ದು ಗೊಳಿಸಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version