Home ಟಾಪ್ ಸುದ್ದಿಗಳು ಸೇಂಟ್ ಮೇರಿ ಚರ್ಚ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ: ಆರೋಪಿ ಬಂಧನ

ಸೇಂಟ್ ಮೇರಿ ಚರ್ಚ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ: ಆರೋಪಿ ಬಂಧನ

ಬೆಂಗಳೂರು: ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಅಶೋಕ ನಗರ ಪೊಲೀಸರು ಒಂದು ತಿಂಗಳ ನಂತರ ಬಂಧಿಸಿದ್ದಾರೆ.

ಆಶೋಕನಗರದ ವಿಲಿಯಂ ಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಆಶೋಕನಗರದ ಸೇಂಟ್ ಮೇರಿ ಚರ್ಚ್ನಲ್ಲಿ ಲೈಟ್ ಆರಿಸಲೆಂದು ಮಹಿಳೆ ಹೊರಗೆ ಬಂದಿದ್ದಾಗ ಆರೋಪಿಯು ಆಕೆಯ ಕುತ್ತಿಗೆಗೆ ಚಾಕು ಇಟ್ಟು, ಕುರ್ಚಿಯ ಮೇಲೆ ಕೂರಿಸಿದ್ದ. ಬಳಿಕ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಮಹಿಳೆ ಕೂಗಾಡಿದಾಗ ಆಕೆಗೆ ಇರಿಯಲು ಯತ್ನಿಸಿದ್ದ. ಆದರೆ ಅದು ಮಹಿಳೆಯ ಬಟ್ಟೆಗೆ ಸಿಕ್ಕಿ ಹರಿದಿತ್ತು. ತಕ್ಷಣ ಆಕೆಯ ಪತಿ ಸ್ಥಳಕ್ಕೆ ಬಂದಿದ್ದರಿಂದ ಆರೋಪಿ ಓಡಿಹೋಗಿದ್ದ. ಈ ವೇಳೆ ರಸ್ತೆಯಲ್ಲಿ ಗಣೇಶೋತ್ಸವ ಮೆರವಣಿಗೆ ಇದ್ದ ಕಾರಣ ಆರೋಪಿಯು ಮೆರವಣಿಗೆಯೊಂದಿಗೆ ಬೆರೆತು ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಪೊಲೀಸರು ಸತತ ಒಂದು ತಿಂಗಳು ಹುಡುಕಾಡಿದ ನಂತರ ಆರೋಪಿಯನ್ನು ಬಂಧಿಸಿದ್ದಾರೆ.

ಈತ ಇನ್ನೂ ಹಲವು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅರೋಪಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version