ನವದೆಹಲಿ: ಹರ್ಯಾಣ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಬಲಪಂಥೀಯ ಹಿಂದುತ್ವ ಗುಂಪುಗಳು ಮಾಂಸದ ಅಂಗಡಿಗಳನ್ನು ಬಲವಂತವಾಗಿ ಮುಚ್ಚುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 7 ರಿಂದ 15 ವವರೆಗೆ ಆಚರಿಸುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಹಿಂದುತ್ವ ಗುಂಪು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಬಲವಂತಪಡಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಮಾತ್ರವಲ್ಲ ಇತ್ತೀಚೆಗೆ ಉತ್ತರ ಪ್ರದೇಶದ ಬಜರಂಗದಳ ಕಾರ್ಯಕರ್ತರು ತಹಶೀಲ್ದಾರ್ ಪ್ರಧಾನ ಕಚೇರಿಗೆ ತೆರಳಿ ನವರಾತ್ರಿ ಸಂದರ್ಭದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ನವರಾತ್ರಿ ಸಂದರ್ಭದಲ್ಲಿ ಮಾಂಸದ ಅಂಗಡಿಗಳನ್ನು ತೆರೆಯುವುದನ್ನು ಮುಂದುವರಿಸಿದರೆ ಬಜರಂಗದಳ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಜಿಲ್ಲಾ ಸಂಚಾಲಕ ಹರೀಶ್ ಕೌಶಿಕ್ ಎಚ್ಚರಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಆಕ್ಟೋಬರ್ 8 ರಂದು ಪತ್ರಕರ್ತ ನೀಲ್ ಮಾಧವ್ ಅವರು ಹಿಂದುತ್ವ ಗುಂಪಿನ ಸದಸ್ಯರು ಮಾಂಸದ ಅಂಗಡಿಗಳನ್ನು ಬಲವಂತಪಡಿಸುತ್ತಿರುವ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಗೋರಕ್ಷಕ ಹಿಂದೂ ದಳದ ನಾಯಕ ವೇದ್ ನಗರದಲ್ಲಿ ನವರಾತ್ರಿ ಆಚರಣೆಯ ಸಮಯದಲ್ಲಿ ಭಾರತದಾದ್ಯಂತ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಬಲವಂತಪಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.