ನಗೆಪಾಟಲಿಗೀಡಾದ ಬಿಜೆಪಿ ಅಭ್ಯರ್ಥಿ…!
ಕೊಯಂಬತ್ತೂರು; ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಒಂದೇ ಒಂದು ಮತ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯಾನೆಕ್ಕಿನ್ ಪಾಳ್ಯಂ ವಾರ್ಡ್’ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಡಿ.ಕಾರ್ತಿಕ್ ಎಂಬಾತ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಅಬ್ಬರದ ಪ್ರಚಾರ ನಡೆಸಿದ್ದ ಕಾರ್ತಿಕ್, ಮೋದಿ, ಅಮಿತ್ ಶಾ ಹಾಗೂ ಹಿರಿಯ ಬಿಜೆಪಿ ನಾಯಕರ ಜೊತೆ ತನ್ನ ಭಾವಚಿತ್ರವನ್ನು ಹಾಕಿದ ಪೋಸ್ಟರ್’ಗಳನ್ನು ವಾರ್ಡ್’ನೆಲ್ಲೆಡೆ ಹಂಚಿದ್ದರು.
ಆದರೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾರ್ತಿಕ್ ಬಿಗ್ ಶಾಕ್ ಎದುರಾಗಿತ್ತು. ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ ಒಂದೇ ಒಂದು ಮತವಾಗಿತ್ತು.
ಆಶ್ಚರ್ಯವೆಂದರೆ ಅದೇ ವಾರ್ಡ್’ನಲ್ಲಿ ಬರುವ ಕಾರ್ತಿಕ್ ಮನೆಯಲ್ಲಿ ಐವರು ಮತದಾರರಿದ್ದರೂ ಯಾರೊಬ್ಬರು ಕೂಡ ತನ್ನ ಮನೆಯ ಸದಸ್ಯನಿಗೆ ಮತದಾನ ಮಾಡಿರಲಿಲ್ಲ..!
ಬಿಜೆಪಿ ಅಭ್ಯರ್ಥಿ ಏಕೈಕ ಮತ ಪಡೆದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಟ್ವಿಟರ್’ನಲ್ಲಿ #Single_Vote_Bjp ಇದೀಗ ಟ್ರೆಂಡಿಂಗ್’ನಲ್ಲಿದೆ.
ತಮಿಳು ಸಿನಿಮಾದ ಹಲವಾರು ಹಾಸ್ಯ ದೃಶ್ಯಗಳನ್ನು ಕಾರ್ತಿಕ್ ಫೋಟೋ ಜೊತೆಗೆ ಜೋಡಿಸಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.