►ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡದ ರೈತರು!
ಹೊಸದಿಲ್ಲಿ: ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ‘ಅಂತಿಮ್ ಅರ್ದಾಸ್’ (ಅಂತಿಮ ಪ್ರಾರ್ಥನೆ) ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಮಂಗಳವಾರ) ಭಾಗವಹಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುವಲ್ಲಿ ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮುಂಚೂಣಿಯಲ್ಲಿರುವ ಪ್ರಿಯಾಂಕಾ ಅವರು ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸಿದರು.
‘ಅಂತಿಮ್ ಅರ್ದಾಸ್’ ಆಯೋಜಿಸಿದ್ದ ಕಿಸಾನ್ ಮೋರ್ಚಾ, ಕಾಂಗ್ರೆಸ್ ನಾಯಕಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಲಿಲ್ಲ. “ನಾವು ಯಾವುದೇ ರಾಜಕಾರಣಿಗಳಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ. ಸಮಾರಂಭವನ್ನು ರಾಜಕೀಯ ರಹಿತವಾಗಿ ಇಡಲು ಬಯಸುತ್ತೇವೆ” ಎಂದು ರೈತ ನಾಯಕರೊಬ್ಬರು ಹೇಳಿದ್ದರು.