ಬೆಂಗಳೂರು: ಬಿಡದಿ ಬಳಿಯ ಖಾಸಗಿ ಈಗಲ್ ಟನ್ ರೆಸಾರ್ಟ್ನಲ್ಲಿನ ವಿಲ್ಲಾದಲ್ಲಿ ವಾಸವಾಗಿದ್ದ ದಂಪತಿಯನ್ನು ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ.
ಈಗಲ್ ಟನ್ ರೆಸಾರ್ಟ್ನ ಸಿ ಬ್ಲಾಕ್ನಲ್ಲಿದ್ದ ರಘುರಾಜ್ (70) ಹಾಗೂ ಆಶಾ (63), ಕೊಲೆಯಾದ ದಂಪತಿಯಾಗಿದ್ದಾರೆ.
ಗಂಡ – ಹೆಂಡತಿಯನ್ನು ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ರಘುರಾಜ್ ನಿವೃತ್ತ ಏರ್ ಫೋರ್ಸ್ ಪೈಲಟ್ ಆಗಿದ್ದು, ಸುಮಾರು ವರ್ಷಗಳಿಂದ ಇಲ್ಲೇ ವಾಸವಾಗಿದ್ದರು. ಮನೆ ಕೆಲಸದವರೇ ಮರ್ಡರ್ ಮಾಡಿರುವ ಶಂಕೆ ಇದ್ದು, ರಾಮನಗರ ಎಸ್ಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆ ಕಾವಲಿಗಿದ್ದ ಸೆಕ್ಯೂರಿಟಿ ಪರಾರಿಯಾಗಿದ್ದು ಆತನ ಮೇಲೆ ಶಂಕೆ ವ್ಯಕ್ತವಾಗಿದೆ.ಜೋಡಿ ಕೊಲೆ ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ