Home ಟಾಪ್ ಸುದ್ದಿಗಳು ಸಮವಸ್ತ್ರ ಕುರಿತ ಆದೇಶ ರಾಜ್ಯ ಸರ್ಕಾರ ಕೂಡಲೇ ವಾಪಾಸ್ ಪಡೆಯಲಿ: ಯು.ಟಿ.ಖಾದರ್

ಸಮವಸ್ತ್ರ ಕುರಿತ ಆದೇಶ ರಾಜ್ಯ ಸರ್ಕಾರ ಕೂಡಲೇ ವಾಪಾಸ್ ಪಡೆಯಲಿ: ಯು.ಟಿ.ಖಾದರ್

ಬೆಂಗಳೂರು: ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ವಿಧಾನ ಸಭೆಯ ಉಪನಾಯಕ ಸ್ಥಾನ ನೀಡಿದ್ದು, ಈ ಸದನದ ಗೌರವಕ್ಕೆ ಚ್ಯುತಿ ಉಂಟಾಗದಂತೆ ಕಾರ್ಯನಿರ್ವಹಿಸಲಾಗುವುದು ಎಂದು ವಿಧಾನ ಸಭೆಯ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟು ಈ ಸ್ಥಾನ ನೀಡಿದ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಸುರ್ಜೆವಾಲ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಅವರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದ ಅವರು, ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ತ್ಯಜಿಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕಾಗಿ ಮುಸ್ಲಿಮರ ಒಲೈಕೆಗೆ ಈ ಹುದ್ದೆಯನ್ನು ತಮಗೆ ನೀಡಿಲ್ಲ. ಸಿ.ಎಂ ಇಬ್ರಾಹಿಂ ವಿಧಾನ ಪರಿಷತ್ ನ ಸದಸ್ಯರು, ಅವರ ಕಾರಣಕ್ಕೆ ನನಗೆ ಈ ಸ್ಥಾನ ನೀಡಿಲ್ಲ. ನಾನು ಕಾಂಗ್ರೆಸ್ ನಲ್ಲಿ ಅನೇಕ ವರ್ಷಗಳ ಕಾಲ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದೇನೆ. ನನ್ನ ಅನುಭವ ಪರಿಗಣಿಸಿ ಈ ಹುದ್ದೆ ನೀಡಲಾಗಿದೆ ಎಂದು ತಿಳಿಸಿದರು.

ಸಿಎಂ ಇಬ್ರಾಹಿಂ ಅವರು ಇನ್ನೂ ಕಾಂಗ್ರೆಸ್ ನಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಮುಂದುವರೆಯಲಿದ್ದಾರೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಹಿಜಾಬ್ ವಿಚಾರದಲ್ಲಿ ರಾಜ್ಯ ಸರ್ಕಾರ ಪರೋಕ್ಷವಾಗಿ ಕೆಲ ಕಾಲೇಜುಗಳಿಗೆ ಬೆಂಬಲ ನೀಡುತ್ತಿದೆ. ಸಮವಸ್ತ್ರ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಮೊದಲಿರುವ ನಿಯಮವನ್ನು ಮುಂದುವರೆಸಿಕೊಂಡು ಹೋಗಬೇಕು. ಶಾಲಾ ಕಾಲೇಜುಗಳ ಕ್ಯಾಂಪಸ್ ನಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

Join Whatsapp
Exit mobile version