Home ಟಾಪ್ ಸುದ್ದಿಗಳು ಭಾರತವನ್ನು ನಕ್ಸಲ್‌ ಮುಕ್ತ ದೇಶವಾಗಿಸಲು ನಿರ್ಧಾರ: ರಾಜನಾಥ್‌ ಸಿಂಗ್‌

ಭಾರತವನ್ನು ನಕ್ಸಲ್‌ ಮುಕ್ತ ದೇಶವಾಗಿಸಲು ನಿರ್ಧಾರ: ರಾಜನಾಥ್‌ ಸಿಂಗ್‌

0

ಹೈದರಾಬಾದ್‌: ದೇಶದಲ್ಲಿ ಕೇವಲ ಐದಾರು ಪ್ರದೇಶಗಳಿಗೆ ನಕ್ಸಲ್‌ ಚಟುವಟಿಕೆ ಸೀಮಿತವಾಗಿವೆ. ಮುಂದಿನ ವರ್ಷ ಮಾರ್ಚ್‌ 31ರೊಳಗೆ ಭಾರತವನ್ನು ನಕ್ಸಲ್‌ ಮುಕ್ತ ದೇಶವನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 128ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಕ್ಸಲ್‌ ತಾಣಗಳು ಶಿಕ್ಷಣ ತಾಣಗಳಾಗಿ ಬದಲಾಗುತ್ತಿವೆ’ ಎಂದು ಹೇಳಿದರು.

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಅವರು, ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡಲಾಗಿದೆ. ನಾಗರಿಕರು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲ. ಭವಿಷ್ಯದಲ್ಲಿ ಪಹಲ್ಗಾಮ್‌ ಉಗ್ರರ ದಾಳಿಯಂತಹ ಘಟನೆಗಳು ನಡೆದರೆ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version