Home ಟಾಪ್ ಸುದ್ದಿಗಳು ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಹೆಚ್ಚಿಸಿದ RBI

ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಹೆಚ್ಚಿಸಿದ RBI

ಮುಂಬೈ: ಕೇಂದ್ರ ಬಜೆಟ್’ನ ಬಳಿಕ ನಡೆದ ಮೊದಲ ಹಣಕಾಸು ನೀತಿಯಲ್ಲಿ (ಎಂಪಿಸಿ), ಆರ್’ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೊ ದರ ಹೆಚ್ಚಳವನ್ನು ಪ್ರಕಟಿಸಿದ್ದಾರೆ.


ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತ ಚೇತರಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ 25 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 6.5ಕ್ಕೆ ನಿಗದಿಪಡಿಸಲಾಗಿದೆ.


ಕಳೆದ ವರ್ಷ ಮೇ ತಿಂಗಳಿನಿಂದ ಆರನೇ ಸಲ ಬಡ್ಡಿದರವನ್ನು ಹೆಚ್ಚಿಸಿರುವ ಆರ್’ಬಿಐ, ಮುಂದಿನ ಹಣಕಾಸು ವರ್ಷದಲ್ಲಿ ಶೇ 6.4 ಬೆಳವಣಿಗೆ ದರ ಇರಲಿದೆ ಎಂದು ಅಂದಾಜಿಸಿದೆ.


ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಶೇ 6.5 ಆಗಿರಲಿದೆ ಎಂದು ತಿಳಿಸಿರುವ ಗವರ್ನರ್ ಶಕ್ತಿಕಾಂತ ದಾಸ್, ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಬಹುತೇಕ ಸದಸ್ಯರು ಹಣದುಬ್ಬರ ನಿಯಂತ್ರಣ ಮಾಡಲು ಬಡ್ಡಿದರ ಹೆಚ್ಚಳದ ಪರವಾಗಿಯೇ ಮತ ನೀಡಿದ್ದಾರೆ.

Join Whatsapp
Exit mobile version