ಕೊಹ್ಲಿ ಪುತ್ರಿಗೆ ರೇಪ್ ಬೆದರಿಕೆ: ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

Prasthutha|

ನವದೆಹಲಿ : ಐಸಿಸಿ ಟಿ- 20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನ ಹಾಗೂ ಮುಹಮ್ಮದ್ ಶಮಿ ವಿರುದ್ಧದ ಟೀಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕ್ಯಾಪ್ಟನ್ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದೆ.

- Advertisement -


ನವೆಂಬರ್ 8ರ ಒಳಗಾಗಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ FIR, ಕೈಗೊಂಡಿರುವ ಕ್ರಮಗಳು ಹಾಗೂ ಆರೋಪಿಗಳ ವಿವರವನ್ನು ಮಹಿಳಾ ಆಯೋಗಕ್ಕೆ ನೀಡುವಂತೆ ದೆಹಲಿಯ ಸಹಾಯಕ ಕಮಿಷನರ್’ಗೆ ಸೂಚಿಸಲಾಗಿದೆ.


ಮುಹಮ್ಮದ್ ಶಮಿ ವಿರುದ್ಧದ ಟೀಕೆಗಳಿಗೆ ಕಠಿಣ ಶಬ್ಧಗಳಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ಕ್ಯಾಪ್ಟನ್ ಕೊಹ್ಲಿ ಧರ್ಮಾಂಧರ ಟಾರ್ಗೆಟ್ ಆಗಿದ್ದರು. ಅಮೆನಾ ಹೆಸರಿನ ಟ್ವಿಟರ್ ಖಾತೆಯಲ್ಲಿ’ ಅನುಷ್ಕಾ ಶರ್ಮಾಳಿಗೆ ನಾಚಿಕೆಯಾಗಬೇಕು. ವಮಿಕಾಳ ಫೋಟೋ ಬಿಡುಗಡೆಯಾಗಲು ಕಾಯುತ್ತಿದ್ದೇನೆ. ಆಕೆಯನ್ನು ಅತ್ಯಾಚಾರ ಮಾಡುತ್ತೇನೆ’ ಎಂದು ಬೆದರಿಕೆ ಹಾಕಲಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಟ್ವೀಟ್’ಅನ್ನು ಇದೀಗ ಡಿಲೀಟ್ ಮಾಡಲಾಗಿದೆ. ಆದರೆ ಆ ಟ್ವೀಟ್’ನ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇಂತಹ ವಿಕೃತ ಕಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

- Advertisement -

Join Whatsapp
Exit mobile version