Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯ ಅತ್ಯಾಚಾರ,ದೇಹ ತುಂಡರಿಸಿ ಕೊಲೆ: ಬಂಧನವಾಗದ ಆರೋಪಿಗಳು

ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯ ಅತ್ಯಾಚಾರ,ದೇಹ ತುಂಡರಿಸಿ ಕೊಲೆ: ಬಂಧನವಾಗದ ಆರೋಪಿಗಳು

ಉತ್ತರ ಪ್ರದೇಶ: 40 ವರ್ಷದ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಆಕೆಯ ದೇಹವನ್ನು ಮೂರು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬಂಡಾದಲ್ಲಿ ನಡೆದಿದ್ದು, ದುಷ್ಕೃತ್ಯವೆಸಗಿದವರಿನ್ನೂ ಪತ್ತೆಯಾಗಿಲ್ಲ.

ಮಂಗಳವಾರ ಮಹಿಳೆ ರಾಜ್‌ಕುಮಾರ್ ಶುಕ್ಲಾ ಅವರ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ತೆರಳಿದ್ದರು. ಸ್ವಲ್ಪ ಸಮಯದ ಮಹಿಳೆಯ 20 ವರ್ಷದ ಮಗಳು ಶುಕ್ಲಾ ಮನೆಗೆ ಹೋದಾಗ ಚಿಲಕ ಹಾಕಿದ ಶುಕ್ಲಾ ಮನೆಯ ಕೊಠಡಿಯಿಂದ ತಾಯಿಯ ಕಿರುಚಾಟ ಕೇಳಿದೆ.

ಸ್ವಲ್ಪ ಸಮಯದ ನಂತರ ಕೋಣೆಯ ಬಾಗಿಲು ತೆರೆದಾಗ ತಾಯಿಯ ಶವ ಮೂರು ತುಂಡುಗಳಾಗಿ ಬಿದ್ದಿರುವುದನ್ನು ನೋಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಜ್‌ಕುಮಾರ್ ಶುಕ್ಲಾ, ಅವರ ಸಹೋದರ ಬೌವಾ ಶುಕ್ಲಾ ಮತ್ತು ರಾಮಕೃಷ್ಣ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಆದರೆ ಆರೋಪಿಗಳು ಇನ್ನೂ ಬಂಧನವಾಗಿಲ್ಲ. ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಘಟನೆಯ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ಯಾಲೆಸ್ತೀನ್ ನಲ್ಲಿ ಅಮಾಯಕರ ಮಾರಣ ಹೋಮ ನಡೆಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಿಎಂ, ತನ್ನ ರಾಜ್ಯದಲ್ಲಿಯೂ ದಲಿತರ, ದುರ್ಬಲರ ಮೇಲಿನ ಹಿಂಸೆಯನ್ನು ಅಸ್ವಾಧಿಸುತ್ತಿದ್ದಾರೆಯೇ ಎಂದು ನೆಟ್ಟಿಗರೊಬ್ಬರು ಕೇಳಿದ್ದು, ವೈರಲ್ ಆಗುತ್ತಿದೆ.

Join Whatsapp
Exit mobile version