Home ಟಾಪ್ ಸುದ್ದಿಗಳು ಮಹಿಳೆಯರಿಗೆ ವಾರ್ಷಿಕ 12,000: ಛತ್ತೀಸ್‌ಗಢ ಬಿಜೆಪಿ ಪ್ರಣಾಳಿಕೆ

ಮಹಿಳೆಯರಿಗೆ ವಾರ್ಷಿಕ 12,000: ಛತ್ತೀಸ್‌ಗಢ ಬಿಜೆಪಿ ಪ್ರಣಾಳಿಕೆ

ರಾಯಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದ್ದು, ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ. ಸೇರಿದಂತೆ ಹಲವು ಬರಪೂರ ಭರವಸೆಯನ್ನು ಬಿಜೆಪಿ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿ ಸರ್ಕಾರ ಬಂದರೆ ಮುಂದಿನ ಐದು ವರ್ಷಗಳಲ್ಲಿ ಛತ್ತೀಸ್ಗಢವನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ‌.

‘ಮೋದಿ ಕಿ ಗ್ಯಾರಂಟಿ 2023’ ಎಂಬ ಶೀರ್ಷಿಕೆಯ ಬಿಜೆಪಿ ಪ್ರಣಾಳಿಕೆಯಲ್ಲಿ “ಛತ್ತೀಸ್ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕೃಷಿ ಉನ್ನತಿ ಯೋಜನೆಯನ್ನು ಪ್ರಾರಂಭಿ ಸಲಾಗುವುದು, 3,100ರ ದರದಲ್ಲಿ 21 ಕ್ವಿಂಟಾಲ್ ಅಥವಾ ಎಕರೆ ಭತ್ತವನ್ನು ಖರೀದಿಸುವುದು, ಖರೀದಿಯಿಂದ ಸಂಗ್ರಹಿಸಿದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದರು.

ಭೂರಹಿತ ರೈತರಿಗೆ ವಾರ್ಷಿಕ 10,000 ರೂ ಅನುದಾನ ನೀಡುತ್ತೇವೆ ಮತ್ತು ರಾಜ್ಯಾದ್ಯಂತ 500 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದೂ ಬಿಜೆಪಿ ಭರವಸೆ ನೀಡಿದೆ‌.

90 ಸದಸ್ಯ ಬಲದ ಛತ್ತೀಸ್ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

Join Whatsapp
Exit mobile version