Home ಟಾಪ್ ಸುದ್ದಿಗಳು ಹರ್ಯಾಣ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಂಜಿತ್ ಚೌಟಾಲಾ

ಹರ್ಯಾಣ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಂಜಿತ್ ಚೌಟಾಲಾ

ಹರ್ಯಾಣ: ಹರ್ಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಬಿಜೆಪಿ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.


ಹರಿಯಾಣ ಕ್ಯಾಬಿನೆಟ್ ಸಚಿವ ಚೌಧರಿ ರಂಜಿತ್ ಸಿಂಗ್ ಚೌತಾಲಾ ಅವರು ಸಂಪುಟದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ರಣಜಿತ್ ಸಿಂಗ್ ಚೌತಾಲಾ ಅವರಿಗೆ ರಾನಿಯಾ ವಿಧಾನಸಭೆಯಿಂದ ಟಿಕೆಟ್ ನೀಡದಿದ್ದಕ್ಕಾಗಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದರು. ಮುಂಬರುವ ಹರಿಯಾಣ ಚುನಾವಣೆಗೆ ಬಿಜೆಪಿ ಹೈಕಮಾಂಡ್ 67 ಅಭ್ಯರ್ಥಿಗಳ ಮೊದಲ ಪಟ್ಟಿಯಿಂದ 9 ಹಾಲಿ ಶಾಸಕರನ್ನು ಕೈಬಿಟ್ಟಿದೆ.


ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ರಣಜಿತ್ ಸಿಂಗ್ ಚೌತಾಲಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ನಾನು ರಾನಿಯಾ ಅಸೆಂಬ್ಲಿಯಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಚೌಟಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಬ್ವಾಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ನನಗೆ ಆಫರ್ ನೀಡಿತ್ತು. ಆದರೆ, ನಾನು ಅದಕ್ಕೆ ನಿರಾಕರಿಸಿದೆ. ನಾನು ರೋಡ್ ಶೋ ಮಾಡುವ ಮೂಲಕ ನನ್ನ ಶಕ್ತಿಯನ್ನು ತೋರಿಸುತ್ತೇನೆ. ನಾನು ಬೇರೆ ಕಡೆಯಿಂದಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದಿದ್ದಾರೆ.

Join Whatsapp
Exit mobile version