ಸಬಿಯಾಳನ್ನು ಕೊಲೆ ಮಾಡಿದ ಅಂಕುರ್ ಚೌಹಾಣ್: ಮತಾಂತರವಾಗಿದ್ದವಳ ದುರಂತ ಅಂತ್ಯ..!

Prasthutha|

ಮೊರಾದಾಬಾದ್: ಮಜೋಲಾ ಪೊಲೀಸ್ ಠಾಣೆಯ ಗಗನ್ ಚೌರಾಹನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

- Advertisement -


ಸುರ್ಜನ್ ನಗರದ ನಿವಾಸಿ ಸಬಿಯಾಳನ್ನು ಪ್ರೀತಿಸಿ ಸಾಕ್ಷಿ ಚೌಹಾಣ್ ಆಗಿ ಅಂಕುರ್ ಮತಾಂತರ ಮಾಡಿಸಿದ್ದ. ದಂಪತಿಗೆ ಈಗ 7 ವರ್ಷದ ಮಗಳು ದುವಾ ಕೂಡ ಇದ್ದಾಳೆ.


ತನಿಖೆಯ ನಂತರ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿ ತನ್ನ ಹೆಂಡತಿಯನ್ನು ಅನುಮಾನ ಪಟ್ಟು ಕೊಂದಿದ್ದೇನೆ ಎಂದು ಹೇಳಿದ್ದಾನೆ.

- Advertisement -


ಸುರ್ಜನ್ ನಗರದ ನಿವಾಸಿ ಸಬಿಯಾ ಖತೂನ್ ಅಲಿಯಾಸ್ ಸಾಕ್ಷಿ ಚೌಹಾಣ್ (30) ಒಂಬತ್ತು ವರ್ಷಗಳ ಹಿಂದೆ ಗ್ರಾಮದ ಅಂಕುರ್ ಚೌಹಾಣ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಸಬಿಯಾಳನ್ನು ಸಾಕ್ಷಿಯಾಗಿ ಮತಾಂತರ ಕೂಡ ಮಾಡಲಾಗಿತ್ತು. ಆ ಬಳಿಕ ಇಬ್ಬರು ಮಜೋಲಾ ಪ್ರದೇಶದ ಗಗನ್ ಚೌರಾಹಾನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.


ಅಂಕುರ್ ಚೌಹಾಣ್ ಆರಂಭದಲ್ಲಿ ಕೆಲಸಕ್ಕೆ ಹೋಗುತ್ತಿದ್ದ, ಆದರೆ ಕಾಲ ಕ್ರಮೇಣ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿಬಿಟ್ಟ. ಇದರಿಂದ ಸಂಸಾರದ ನಿರ್ವಹಣೆಗೆ ತೊಂದರೆಯಾಗಿತ್ತು. ಆ ಬಳಿಕ ಚೌಹನ್ ಪತ್ನಿಯನ್ನೇ ಕೆಲಸಕ್ಕೆ ಕಳುಹಿಸಿದ್ದಾನೆ. ಸಾದಿಯಾ ಅಲಿಯಾಸ್ ಸಾಕ್ಷಿ ಚೌಹಾಣ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ. ಕೆಲಸದ ಒತ್ತಡದಿಂದ ಸಾಕ್ಷಿ ಕೆಲವೊಮ್ಮೆ ಮನೆಗೆ ತಡವಾಗಿ ಬರುತ್ತಿದ್ದರು. ಹೆಚ್ಚು ತಡವಾದಾಗ ಕೆಲವೊಮ್ಮೆ ಯಾರೋ ಒಬ್ಬರು ಕಾರ್ಖಾನೆಯಿಂದ ಬಿಡಲು ಬರುತ್ತಿದ್ದರು.


ಸಬಿಯಾ ಮನೆಯನ್ನು ನಡೆಸುತ್ತಿದ್ದಳು. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಘಟನೆ ನಡೆದ ದಿನ ಅಂಕುರ್ ಸಾಕ್ಷಿಯೊಂದಿಗೆ ಜಗಳವಾಡಿದ್ದು, ಕೋಪಗೊಂಡು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಮಗಳೊಂದಿಗೆ ಮನೆ ಬಿಟ್ಟು ಹೋಗಿದ್ದಾನೆ. ರಾತ್ರಿ 12 ಗಂಟೆ ಸುಮಾರಿಗೆ ಮನೆ ಮಾಲೀಕ ಅಂಕುರ್ ಗೆ ಕರೆ ಮಾಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಮಾಲೀಕ ಅಂಕುರ್ ಅವರ ಕೋಣೆಗೆ ಇಣುಕಿ ನೋಡಿದಾಗ ಸಾಕ್ಷಿಯ ಶವ ಬಿದ್ದಿರುವುದನ್ನು ನೋಡಿದ್ದಾರೆ.


ಮನೆಯ ಮಾಲೀಕರ ಮಾಹಿತಿಯ ಮೇರೆಗೆ, ನಗರ ಎಸ್ಪಿ ಕುಮಾರ್ ರಣವಿಜಯ್ ಸಿಂಗ್ ಮತ್ತು ಸಿಒ ಸುನೀತಾ ದಹಿಯಾ ಮನೆಗೆ ಆಗಮಿಸಿದರು. ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಸಹ ಸಂಗ್ರಹಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಶವಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಅಂಕುರ್ ಚೌಹಾಣ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.



Join Whatsapp
Exit mobile version