Home ಟಾಪ್ ಸುದ್ದಿಗಳು ಅಜಿಂಕ್ಯ ರಹಾನೆ ಇತಿಹಾಸ | ಪ್ರತಿಷ್ಠಿತ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಕ್ರಿಕೆಟಿಗ!

ಅಜಿಂಕ್ಯ ರಹಾನೆ ಇತಿಹಾಸ | ಪ್ರತಿಷ್ಠಿತ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಕ್ರಿಕೆಟಿಗ!

ಮೆಲ್ಬೊರ್ನ್ : ಪ್ರಥಮ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಟೆಸ್ಟ್ ವೃತ್ತಿ ಜೀವನದಲ್ಲಿ 12ನೇ ಶತಕ ಪೂರೈಸಿದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಪ್ರತಿಷ್ಠಿತ ‘ಮುಲ್ಲಾಘ್ ಪದಕ’ದ ಸ್ವೀಕರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1868ರಲ್ಲಿ ಜಾನಿ ಮುಲ್ಲಾಘ್ ಅವರ ನಾಯಕತ್ವದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಗೆ ಮೊದಲ ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿತ್ತು. ಈ ಸ್ಮರಣಾರ್ಥವಾಗಿ ಮಾಜಿ ನಾಯಕನ ಹೆಸರಿನಲ್ಲಿ ಈ ಪದಕ ನೀಡಲಾಗಿದೆ. ಬಾಕ್ಸಿಂಗ್ ಡೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಆಟಗಾರನಿಗೆ ಈ ಪದಕ ನೀಡಲು ನಿರ್ಧರಿಸಲಾಗಿತ್ತು. ಈ ಆಟದಲ್ಲಿ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಪ್ರತಿಷ್ಠಿತ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಾತ್ರರಾಗಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

Join Whatsapp
Exit mobile version