Home ಟಾಪ್ ಸುದ್ದಿಗಳು ಭಾರತ್ ಜೋಡೊ ಯಾತ್ರೆಯಲ್ಲಿ ಗಮನ ಸೆಳೆದ ಜ್ಯೂನಿಯರ್ ರಾಹುಲ್‌ ಗಾಂಧಿ!

ಭಾರತ್ ಜೋಡೊ ಯಾತ್ರೆಯಲ್ಲಿ ಗಮನ ಸೆಳೆದ ಜ್ಯೂನಿಯರ್ ರಾಹುಲ್‌ ಗಾಂಧಿ!

ಬಾಗಪತ್‌ (ಉತ್ತರ ಪ್ರದೇಶ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ತದ್ರೂಪಿ ಯುವಕನೊಬ್ಬ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು, ಈ ಕುರಿತ ವೀಡಿಯೋ ವ್ಯಾಪಕ ವೈರಲ್ ಆಗಿದೆ.

ರಾಹುಲ್ ಗಾಂಧಿ ಅವರನ್ನೇ ಹೋಲುವ ಮೀರತ್ ಮೂಲದ ಫೈಸಲ್‌ ಚೌಧರಿ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಉತ್ತರ ಪ್ರದೇಶದ ಬಾಗ್‌’ಪತ್‌ ನಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿ ಬಿಳಿ ಟೀ ಶರ್ಟ್ ಧರಿಸಿ ಗಮನ ಸೆಳೆದಿದ್ದಾರೆ.

ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಮೇಠಿಯಿಂದ ಬಂದಿದ್ದ ಪಕ್ಷದ ನೂರಾರು ಕಾರ್ಯಕರ್ತರು ಬಿಳಿ ಟೀ–ಶರ್ಟ್‌ಗಳನ್ನು ಧರಿಸಿ ರಾಹುಲ್‌ ಗೆ ಬೆಂಬಲ ಸೂಚಿಸಿದರು.

Join Whatsapp
Exit mobile version