ಶ್ರೀನಗರ: ಯುಎಪಿಎ ಪ್ರಕರಣದಲ್ಲಿ ಬಂಧಿತನಾಗಿದ್ದ ಕಾಶ್ಮೀರಿ ಪತ್ರಕರ್ತ ಮುಹಮ್ಮದ್ ಮನಂದರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಒಂದು ವರ್ಷದ ಬಳಿಕ ತಿಹಾರ್ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
ಯುಎಪಿಎ ಕಾಯ್ದೆಯಡಿ ಮನಂದರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಒಂದು ವರ್ಷದ ಹಿಂದೆ ಬಂಧಿಸಿತ್ತು. ಶ್ರೀನಗರ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮುಹಮ್ಮದ್ ಮನಂದರ್ ಅವರ ವಿರುದ್ಧದ ಆರೋಪಗಳು “ಕೇವಲ ಊಹಾಪೋಹಗಳು ಮಾತ್ರ” ಎಂದು ನ್ಯಾಯಾಲಯ ಹೇಳಿದೆ.
2021ರ ಅಕ್ಟೋಬರ್‌ನಲ್ಲಿ ಆತನ ಸಹೋದರ ಹನಂದರ್ ಸೇರಿದಂತೆ 12 ಜನರೊಂದಿಗೆ ಮನಂದರ್ ಕೂಡ ಬಂಧಿತರಾಗಿದ್ದರು. ಆರೋಪ ಸಾಬೀತುಪಡಿಸುವಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ವಿಫಲವಾಗಿದೆ ಜಾಮೀನು ಅರ್ಜಿಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪತ್ರಿಕೋದ್ಯಮದಲ್ಲಿ ಮುಂದುವರಿಯುವ ಬಯಕೆಯನ್ನು ಮನಂದರ್ ವ್ಯಕ್ತಪಡಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.