Home ಟಾಪ್ ಸುದ್ದಿಗಳು ಆನ್‌ ಲೈನ್‌ ನೋಂದಣಿ ಮಾಡಿಕೊಳ್ಳದವರಿಗೂ ಲಸಿಕೆ ನೀಡಿ : ರಾಹುಲ್‌ ಗಾಂಧಿ

ಆನ್‌ ಲೈನ್‌ ನೋಂದಣಿ ಮಾಡಿಕೊಳ್ಳದವರಿಗೂ ಲಸಿಕೆ ನೀಡಿ : ರಾಹುಲ್‌ ಗಾಂಧಿ

ನವದೆಹಲಿ : ಆನ್‌ ಲೈನ್‌ ನೋಂದಣಿ ಮಾಡಿಕೊಳ್ಳದವರಿಗೂ ಕೋವಿಡ್‌ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ʼಕೋವಿನ್‌ʼ ಪೋರ್ಟಲ್‌ ನಲ್ಲಿ ನೋಂದಣಿ ಮಾಡಿಸದೆ, ನೇರವಾಗಿ ಲಸಿಕೆ ಕೇಂದ್ರಕ್ಕೆ ಬಂದವರಿಗೂ ಲಸಿಕೆ ಕೊಡಬೇಕು. ಆನ್‌ ಲೈನ್‌ ಮೂಲಕ ನೋಂದಣಿ ಕಡ್ಡಾಯ ಎಂಬುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಲಸಿಕೆ ಕೇಂದ್ರಕ್ಕೆ ಬರುವ ಪ್ರತಿ ಅರ್ಹ ವ್ಯಕ್ತಿಗೆ ಲಸಿಕೆ ನೀಡಬೇಕು. ಇಂಟರ್ನೆಟ್‌ ಸೌಲಭ್ಯ ಹೊಂದಿರದವರೂ ಬದುಕುವ ಹಕ್ಕಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಲಸಿಕೆ ಪಡೆಯಲು ಆನ್‌ ಲೈನ್‌ ನೋಂದಣಿ ಕಡ್ಡಾಯಗೊಳಿಸಬಾರದು. ಪಟ್ಟಣ-ನಗರ ಪ್ರದೇಶಗಳಿಂದ ದೂರ ವಾಸಿಸುತ್ತಿರುವವರು, ಗ್ರಾಮೀಣ ಪ್ರದೇಶದವರು ಹಾಗೂ ಬಡವರಲ್ಲಿ ಸ್ಮಾರ್ಟ್‌ ಫೋನ್‌ ಇರುವುದಿಲ್ಲ. ಡಿಜಿಟಲ್‌ ಸಂಪರ್ಕದಿಂದ ವಂಚಿತರಾಗಿರುವವರಿಗೂ ಲಸಿಕೆ ಸಿಗುವಂತಾಗಬೇಕು ಎಂದು ಕಾಂಗ್ರೆಸ್‌ ಮೊದಲಿನಿಂದಲೂ ಆಗ್ರಹಿಸುತ್ತಿದೆ.

Join Whatsapp
Exit mobile version