Home ಟಾಪ್ ಸುದ್ದಿಗಳು ಜ.18- 19ರಂದು ತಣ್ಣೀರುಬಾವಿಯಲ್ಲಿ ಗಾಳಿಪಟ ಉತ್ಸವ

ಜ.18- 19ರಂದು ತಣ್ಣೀರುಬಾವಿಯಲ್ಲಿ ಗಾಳಿಪಟ ಉತ್ಸವ

►11 ದೇಶಗಳ ಗಾಳಿಪಟ ತಂಡಗಳು ಭಾಗಿ


ಮಂಗಳೂರು: ಟೀಮ್ ಮಂಗಳೂರು ನೇತೃತ್ವದಲ್ಲಿ ಜ. 18 ಮತ್ತ 19ರಂದು ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ತಣ್ಣೀರುಬಾವಿ ಬೀಚ್ ನಲ್ಲಿ ನಡೆಯಲಿದೆ.


11 ದೇಶಗಳು ಗಾಳಿಪಟ ತಂಡಗಳ ಜತೆಗೆ ಒರಿಸ್ಸಾ, ಕೇರಳ, ತೆಲಂಗಾಣ, ರಾಜಸ್ತಾನ, ಮಹಾರಾಷ್ಟ, ಗುಜರಾತ್ನ ಗಾಳಿಪಟ ತಂಡಗಳೂ ವೈವಿಧ್ಯಮಯ ಗಾಳಿಪಟಗಳೊಂದಿಗೆ ಮಂಗಳೂರಿನ ಕಡಲ ಬಾನಂಗಳದಲ್ಲಿ ಎರಡು ದಿನಗಳ ಕಾಲ ಚಿತ್ತಾರ ಮೂಡಿಸಲಿದ್ದಾರೆ.


ಇದು ಟೀಮ್ ಮಂಗಳೂರು ತಂಡದ 8 ನೆಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದ್ದು, ಗಾಳಿಪಟ ತಂಡಗಳು ಈ ಉತ್ಸವದಲ್ಲಿ ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ, ಬಣ್ಣಗಳ ಗಾಳಿಪಟಗಳನ್ನು ಹಾರಿಸಲಿದೆ. ಟೀಮ್ ಮಂಗಳೂರು ತಂಡವು ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ. ಕೊರಿಯಾ, ಹಾಂಗ್ ಕಾಂಗ್, ದುಬೈ, ಕತಾರ್ ಮುಂತಾದ ದೇಶಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಗೊಳಿಸಿವೆ.
‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ವಾಕ್ಯದಲ್ಲಿ ಈ ಗಾಳಿಪಟ ಉತ್ಸವವು ಜರಗಲಿದ್ದು, ದೇಶ, ದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶವಾಗಿರುತ್ತದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಎರೋ ಫಾಯ್ಸ್ ಗಾಳಿಪಟಗಳು (ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬ್ರಹತ್ ಗಾಳಿಪಟಗಳು) ಸೀರೀಸ್ ಕೈಟ್ (ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರ ಮನರಂಜನೆಗೆ ಸೂತ್ರವಾಗಲಿವೆ.


ಶನಿವಾರ ಸಂಜೆ 5 ಗಂಟೆಗೆ ಈ ಗಾಳಿಪಟ ಉತ್ಸವವನ್ನು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಉದ್ಘಾಟನೆ ಮಾಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಗಂಟೆ 3 ರಿಂದ ರಾತ್ರಿ 9 ರ ತನಕ ಗಾಳಿಪಟ ಉತ್ಸವ ನಡೆಯಲಿದೆ.

Join Whatsapp
Exit mobile version