Home ಕರಾವಳಿ ಪುತ್ತೂರು | ಇಸ್ಲಾಂ ಧರ್ಮದ ಅವಹೇಳನ: ಅರುಣ್ ಕುಮಾರ್ ಪುತ್ತಿಲ ವಿರುದ್ಧ SDPI ದೂರು

ಪುತ್ತೂರು | ಇಸ್ಲಾಂ ಧರ್ಮದ ಅವಹೇಳನ: ಅರುಣ್ ಕುಮಾರ್ ಪುತ್ತಿಲ ವಿರುದ್ಧ SDPI ದೂರು

0

ಪುತ್ತೂರು: ನಿರಂತರವಾಗಿ ಇಸ್ಲಾಂ ಧರ್ಮವನ್ನು ಹಿಯಾಳಿಸಿ, ಕೋಮು ಪ್ರಚೋದನೆ ನೀಡುತ್ತಿರುವ ಸಂಘಪರಿವಾರದ ನಾಯಕ, ರೌಡಿ ಶೀಟರ್ ಅರುಣ್ ಕುಮಾರ್ ಪುತ್ತಿಲ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪುತ್ತೂರು ಆರಕ್ಷಕ ಠಾಣೆಗೆ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ ಅಶ್ರಫ್ ಬಾವು‌ ದೂರನ್ನು ಸಲ್ಲಿಸಿದ್ದಾರೆ.

ದೂರಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ರಸ್ತೆ ತಡೆ ಮಾಡಿದ್ದರ ವಿರುದ್ಧ ಹಾಗೂ ಒಂದು ಧರ್ಮವನ್ನು ನಿಂದಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ದೂರಿನಲ್ಲಿ ಏನಿದೆ?

ದಿನಾಂಕ 24/04/2025 ರಂದು ಸಮಯ ಸಂಜೆ ಸುಮಾರು 06 ಗಂಟೆಗೆ ಬಿಜೆಪಿ ಪಕ್ಷದ ವತಿಯಿಂದ ಪುತ್ತೂರು ಬಸ್ಸು ನಿಲ್ದಾಣದ ಗಾಂಧಿಕಟ್ಟೆಯ ಸಮೀಪ, ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ವಿರುದ್ಧದ ಪ್ರತಿಭಟನೆಯಲ್ಲಿ ನಿರಂತರವಾಗಿ ಕೋಮುಭಾವನೆ ಕೆರಳಿಸುತ್ತಿರುವ ರೌಡಿಶೀಟರ್ ಅರುಣ್ ಕುಮಾರ್ ಪುತ್ತಿಲ ಎನ್ನುವವನು ಸಾರ್ವಜನಿಕ ಭಾಷಣ ಮಾಡುತ್ತಾ ಮುಸ್ಲಿಮರನ್ನು ಹಿಯಾಳಿಸುತ್ತಾ ‘ಇಸ್ಲಾಂ ಧರ್ಮ ಇರುವವರಿಗೆ ಭಯೋತ್ಪಾದನೆ ನಿಲ್ಲುವುದಿಲ್ಲ ಎನ್ನುತ್ತಾ ಇತ್ತೀಚೆಗೆ ನಡೆದ ಕಣ್ಣೂರಿನ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆಯನ್ನು ಉಲ್ಲೇಖಿಸುತ್ತಾ ಮಂಗಳೂರಿನಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿದ್ದಾರೆ. ಮುಸ್ಲಿಮರೆ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಭಯೋತ್ಪಾದನೆ ನಡೆಸಿದವರೆಲ್ಲಾ ಮುಸಲ್ಮಾನರು’ ಎಂದು ಮುಸ್ಲಿಮರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಹಿಂದುಗಳ ಹಾಗೂ ಇನ್ನಿತರ ಧರ್ಮದವರಲ್ಲಿ ಬಹಿಷ್ಕಾರದ ಭಾವನೆ ಮೂಡುವಂತೆ ಮಾಡುತ್ತಾ ಇಸ್ಲಾಂ ಧರ್ಮವನ್ನು ಭಯೋತ್ಪಾದನಾ ಧರ್ಮವನ್ನಾಗಿ ಉಲ್ಲೇಖಿಸುತ್ತಾ  ಕೋಮು ಭಾವನೆ ಕೆರಳಿಸುತ್ತಾ ಜೈಶ್ರೀರಾಂ ಘೋಷಣೆ ಕೂಗುತ್ತಾ ಹಿಂದುತ್ವವಾದದ ಮೂಲಕ ವಿಷ ಬೀಜ ಬಿತ್ತುತ್ತಾ ಸಾಮಾನ್ಯ ಜನರ ಮನಸ್ಸಿಗೆ ಇಸ್ಲಾಂ ಧರ್ಮದ ಬಗ್ಗೆ ಕೀಳು ಮಟ್ಟದ ಭಾವನೆ ಮೂಡುವಂತೆ ಮಾಡಿದ್ದಾರೆ. ಅಲ್ಲದೆ ಅವರೊಂದಿಗೆ ಪ್ರತಿಭಟನೆಯ ಸಂಘಟಕರು ಎದ್ರಿದಾರರು ಬೆಂಬಲ ನೀಡಿದಲ್ಲದೆ ಪ್ರೇರಣೆ ಮಾಡಿರುತ್ತಾರೆ. ಆದ್ದರಿಂದ ಎದ್ರಿದಾರ ಆರೋಪಿ ವಿರುದ್ಧ ಹಾಗೂ ಈ ಸಭೆಯ ಆಯೋಜಕರ ವಿರುದ್ಧ ಕಾನೂನು ಬಾಹಿರ ಸಭೆ ಸಾರ್ವಜನಿಕ ಸಂಚಾರಕ್ಕೆ ತಡೆ ಮಾಡಿ ರಸ್ತೆ ತಡೆ ಹಾಗೂ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಕೋಮು ಭಾವನೆ ಕೆರಳಿಸಿ ಕೋಮು ಗಲಭೆಗೆ ಯತ್ನಿಸಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಒಂದನೇ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗಿ ಈ ಮೂಲಕ ವಿನಂತಿ ಎಂದು ಊರಿನಲ್ಲಿ ಉಲ್ಲೇಖಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version