ಪುಂಜಾಲಕಟ್ಟೆ: ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಪುಂಜಾಲಕಟ್ಟೆ ಹಾಗೂ ಅಸ್ಪಿರೆಂಟ್ ಕನ್ಸಲ್ಟೆನ್ಸಿ ಬೆಂಗಳೂರು ಸಹಯೋಗದೊಂದಿಗೆ ಪರೀಕ್ಷಾ ಪೂರ್ವ ತರಬೇತಿ ಹಾಗೂ ಎಸೆಸ್ಸೆಲ್ಸಿ, ಪಿಯುಸಿ ಮುಂದೆ ಏನು ಎಂಬ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ ಶಿಬಿರ ರೌಲತುಲ್ ಉಲೂಂ ಮದರಸ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆ ಖತೀಬ್ ಅಶ್ರಫ್ ಫೈಝಿ ಉಸ್ತಾದ್ ದುವಾ ಮಾಡಿ ಚಾಲನೆ ನೀಡಿದರು. ಅಸ್ಪಿರೆಂಟ್ ಕನ್ಸಲ್ಟೆನ್ಸಿ ಬೆಂಗಳೂರು ಇದರ ಸಂಪನ್ಮೂಲ ವ್ಯಕ್ತಿಗಳಾದ ನಿಝಾಮ್ ಬೆಂಗಳೂರು ಹಾಗೂ ತೌಸೀಫ್ ಕಕ್ಕಿಂಜೆ ಮಾಹಿತಿ ಕಾರ್ಯಾಗಾರ ನಡೆಸಿದರು. ಕಾರ್ಯಕ್ರಮದಲ್ಲಿ ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಪುಂಜಾಲಕಟ್ಟೆ, ಬದ್ರಿಯಾ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ಲತೀಫ್, ಸಿದ್ದೀಕ್ ಪೊಲೀಸ್, ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ನೌಶಾದ್ ಇಂಜಿನಿಯರ್, ಯಂಗ್ ಮೆನ್ಸ್ ಜೊತೆ ಕಾರ್ಯದರ್ಶಿ ಹಿದಾಯತುಲ್ಲಾ ಇಂಜಿನಿಯರ್ ಉಪಸ್ಥಿತರಿದ್ದರು.
ಯಂಗ್ ಮೆನ್ಸ್ ಕಾರ್ಯದರ್ಶಿ ಅಬ್ದುಲ್ ರವೂಫ್ ಸ್ವಾಗತಿಸಿ ಧನ್ಯವಾದಗೈದರು.