Home ಟಾಪ್ ಸುದ್ದಿಗಳು ‘ಸಂವಿಧಾನದಷ್ಟೇ ರಾಮಾಯಣ, ಮಹಾಭಾರತವೂ ಮುಖ್ಯ’ ಎಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

‘ಸಂವಿಧಾನದಷ್ಟೇ ರಾಮಾಯಣ, ಮಹಾಭಾರತವೂ ಮುಖ್ಯ’ ಎಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಚಿತ್ರದುರ್ಗ: ವಿಶ್ವವೇ ಭಾರತದತ್ತ ಮುಖ ಮಾಡುತ್ತಿದ್ದು, ಸಾಧನೆಗೆ ವೇಗ ನೀಡಲಾಗಿದೆ. ದೇಶದಲ್ಲಿ ಸಂವಿಧಾನದಷ್ಟೇ ರಾಮಾಯಣ, ಮಹಾಭಾರತ ಕೂಡ ಮುಖ್ಯ. ಈ ಪವಿತ್ರ ಗ್ರಂಥಗಳು ಹಿಂದುಗಳ ಜೀವನ ಪದ್ಧತಿಯಾಗಿದೆ. ಹೀಗಾಗಿ ಬಹುಸಂಖ್ಯಾತರಿಗೆ ಇತರೆ ಧರ್ಮೀಯರು ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಹೇಳಿದ್ದಾರೆ.

ಚಿತ್ರದುರ್ಗದಿಂದ ಅಯೋಧ್ಯಗೆ ಹೊರಟಿರುವ ಜಿಲ್ಲೆಯ 415 ರಾಮಭಕ್ತರಿಗೆ ಭಾನುವಾರ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ರಾಮನ ದರ್ಶನ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

500 ವರ್ಷಗಳ ಹೋರಾಟದ ಫಲವಾಗಿ ಶ್ರೀರಾಮಮಂದಿರ ಲೋಕಾರ್ಪಣೆಗೊಂಡು ಅಸಂಖ್ಯಾತ ಭಕ್ತರನ್ನು ಸೆಳೆಯುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರ ಆಪೇಕ್ಷೆಯಂತೆ ಸ್ವಾಮಿಯ ದರ್ಶನಕ್ಕೆ ರಾಷ್ಟ್ರದ ಮೂಲೆ-ಮೂಲೆಗಳಿಂದ ತೆರಳುತ್ತಿರುವ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಅಗತ್ಯ ಸಹಕಾರ ನೀಡಿರುವುದು ಸ್ವಾಗತಾರ್ಹ ಎಂದರು.

ರಾಮ ಮಂದಿರಕ್ಕಾಗಿ ಹೋರಾಟ ಮಾತ್ರವಲ್ಲ, ಹಲವರ ಪ್ರಾಣ ತ್ಯಾಗವಾಗಿದೆ. ಅಯೋಧ್ಯೆ, ಕಾಶಿ, ಮಥುರೆ ಭಾರತದ ಬಹುಸಂಖ್ಯಾತರ ಆಸ್ಮಿತೆಯಾಗಿದೆ. ರಾಮರಾಜ್ಯ ನಿರ್ಮಾಣ ಆಗಬೇಕೆಂಬುದು ಕೋಟ್ಯಾಂತರ ಜನರ ಕನಸಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು.

Join Whatsapp
Exit mobile version