Home ಟಾಪ್ ಸುದ್ದಿಗಳು ಪುನೀತ್ ಆಸ್ಪತ್ರೆಗೆ ಹೋಗುವ ಮುನ್ನ ಮನೆಯಲ್ಲಿ ಆತಂಕದ ವಾತಾವರಣ: ಸಿಸಿ ಟಿವಿಯಲ್ಲಿ ಸೆರೆ

ಪುನೀತ್ ಆಸ್ಪತ್ರೆಗೆ ಹೋಗುವ ಮುನ್ನ ಮನೆಯಲ್ಲಿ ಆತಂಕದ ವಾತಾವರಣ: ಸಿಸಿ ಟಿವಿಯಲ್ಲಿ ಸೆರೆ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಮೃತಪಟ್ಟು ಇಂದಿಗೆ 5 ದಿನ ಕಳೆದಿದೆ. ಆದರೆ ಇಂದು ಅವರ ಮನೆಯ ಸಿಸಿಟಿವಿ ದೃಶ್ಯವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗಾಬರಿಯಿಂದ ಕೆಲಸದವರು ಮನೆಯಿಂದ ಒಳಗೆ ಓಡಿಹೋಗುತ್ತಾರೆ. ಬಳಿಕ  ಪುನೀತ್​ ರಾಜ್ ​ಕುಮಾರ್ ​ ಅವರು ಮನೆಯಿಂದ ಹೊರ ಬಂದು ಕಾಯುತ್ತಿರುತ್ತಾರೆ.

ಇದಾದ ಬೆನ್ನಲ್ಲೇ ಅವರ ಪತ್ನಿ ಮನೆಯಿಂದ ಹೊರ ಬರುತ್ತಾರೆ. ಇಬ್ಬರೂ ಕಾರು ಏರಿ ಮನೆಯಿಂದ ಹೊರಡುತ್ತಾರೆ. ಕಾರು ಹೊರಡುತ್ತಿದ್ದಂತೆ ಸೆಕ್ಯುರಿಟಿ ಸಿಬ್ಬಂದಿ ಮನೆಯ ಗೇಟ್​ ತೆರೆಯುತ್ತಾರೆ. ಇದಿಷ್ಟು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ. ಈ ದೃಶ್ಯಗಳಲ್ಲಿ ಎಲ್ಲರೂ ಆತಂಕ ಗೊಂಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.

Join Whatsapp
Exit mobile version