Home ಕರಾವಳಿ ಮಂಗಳೂರು: ಸರಗಳ್ಳತನ ಮಾಡುತ್ತಿದ್ದ ಏಳು ಜನರ ಬಂಧನ

ಮಂಗಳೂರು: ಸರಗಳ್ಳತನ ಮಾಡುತ್ತಿದ್ದ ಏಳು ಜನರ ಬಂಧನ

ಮಂಗಳೂರು: ಮಹಿಳೆಯರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾಗುತ್ತಿದ್ದ ಏಳು ಜನ ಸರಗಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಬ್ದುಲ್ ಇಶಾಮ್, ಸಪ್ವಾನ್, ಮೊಹಮ್ಮದ್ ತೌಸೀಪ್, ಅಬ್ದುಲ್ ಖಾದರ್ ಸಿನಾನ್, ಮೊಹಮ್ಮದ್ ಪಜಲ್, ಅರ್ಷಾದ್, ಮುಜಾಹಿದುರ್ ರೆಹಮಾನ್ ಎಂದು ಗುರುತಿಸಲಾಗಿದೆ.

13 ಸರಗಳ್ಳತನ, 5 ಸರಗಳ್ಳತನಕ್ಕೆ ಯತ್ನ, 3 ದ್ವಿಚಕ್ರ ವಾಹನ ಕಳ್ಳತನ, 2 ರಾಬರಿ, 1 ಪೊಲೀಸ್ ಹಲ್ಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಬಂಧಿತ ಆರೋಪಿಗಳಿಂದ 15 ಲಕ್ಷ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಲಾಗಿದೆ.

ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಸಿ.ಸಿ ಕ್ಯಾಮರಾ ಇಲ್ಲದ ಕಡೆ ಕೃತ್ಯ ಎಸಗುತ್ತಿದ್ದ ಕಳ್ಳರು ಕದ್ದ ಬೈಕ್ ನ್ನೇ ಸರಗಳ್ಳತನಕ್ಕೆ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ ಸರಣಿ ಸರಗಳ್ಳತನ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಪ್ರಕರಣ ಬೇದಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ನಗದು ಬಹುಮಾನ ನೀಡಿದ್ದಾರೆ.

Join Whatsapp
Exit mobile version