Home ಟಾಪ್ ಸುದ್ದಿಗಳು ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದ ವ್ಯಕ್ತಿಯ ಪತ್ತೆಗೆ ಲುಕ್ ಔಟ್ ನೋಟೀಸ್ ಜಾರಿ!

ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದ ವ್ಯಕ್ತಿಯ ಪತ್ತೆಗೆ ಲುಕ್ ಔಟ್ ನೋಟೀಸ್ ಜಾರಿ!

ಮುಂಬೈ: ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದಿದ್ದ ವ್ಯಕ್ತಿಯನ್ನು ಪತ್ತೆ ಮಾಡಲು ಪುಣೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದ ಕಿರಣ್ ಗೋಸ್ವಾಮಿಯನ್ನು ಪತ್ತೆ ಹಚ್ಚಲು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಕಿರಣ್ ಗೋಸ್ವಾಮಿ ಇನ್ನು ಮುಂದೆ ದೇಶವನ್ನು ತೊರೆಯಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಅತಿತಾಬ್ ಗುಪ್ತಾ ಹೇಳಿದ್ದಾರೆ.

2018 ರಲ್ಲಿ ಪುಣೆ ನಗರ ಪೊಲೀಸರು ದಾಖಲಿಸಿದ್ದ ಪ್ರಕರಣವೊಂದರಲ್ಲಿ ಕಿರಣ್ ಗೋಸ್ವಾಮಿ ಆರೋಪಿಯಾಗಿದ್ದಾನೆ.

Join Whatsapp
Exit mobile version