ಬೆಂಗಳೂರು: KSRTC, BMTC ಬಸ್ ನೌಕರರಿಗೆ ಆಯುಧ ಪೂಜೆಗೆ ಬಸ್ ಪೂಜೆ ಮಾಡಲು ರಾಜ್ಯ ಸರಕಾರ ತಲಾ ಬಸ್ಸಿಗೆ ಕೇವಲ 100 ರೂ ನೀಡಿದ್ದು, 100 ರೂನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1 ಬಸ್‌ಗೆ ಕೇವಲ ₹100 ರೂ ಅಂತೆ ಆಯುಧ ಪೂಜೆ ಹಿನ್ನೆಲೆಯಲ್ಲಿ ಸಾರಿಗೆ ನಿಗಮ ನೀಡಿದೆ. ಆದರೆ 100 ರೂ.ಗೆ ಬಸ್ಸುಗಳನ್ನು ಪೂಜೆ ಮಾಡಲು ಅಸಾಧ್ಯ ಎಂದು ನೌಕರರು ಅಸಮಾಧಾನ ಹೊರ ಹಾಕಿದ್ದಾರೆ. 100 ರೂ ಯಲ್ಲಿ ಏನೂ ಮಾಡುವುದಕ್ಕೂ ಆಗುವುದಿಲ್ಲ. ಬಸ್ಸಿಗೆ ಹೇಗೆ ಪೂಜೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಸಂಸ್ಥೆಯ ಕಾರು ಮತ್ತು ಜೀಪ್ ಗಳನ್ನು ಪೂಜೆ ಮಾಡಲು ಕೇವಲ 40 ರೂಪಾಯಿ ಕೊಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಪೂಜೆ ಮಾಡಬಹುದು ಮಾಡಿ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಸರಕಾರ ಕಳೆದ ಎರಡು ತಿಂಗಳಿನಿಂದ ನೌಕರರ ಪೂರ್ಣ ಸಂಬಳವನ್ನೇ ನೀಡುತ್ತಿಲ್ಲ ಹೀಗಾಗಿ ಸ್ವಂತ ಖರ್ಚಿನಿಂದ ಪೂಜೆ ಸಲ್ಲಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅವರು ಕೊಡುವ ನೂರು ರೂಪಾಯಿಯಿಂದ ಎರಡು ಬಾಳೆಕಂದು ಕೂಡಾ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.