Home ಟಾಪ್ ಸುದ್ದಿಗಳು ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ತೀವ್ರ: ರೈತ ಮುಖಂಡ

ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ತೀವ್ರ: ರೈತ ಮುಖಂಡ

ನವದೆಹಲಿ: ನಿರುದ್ಯೋಗದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಒಂದು ವೇಳೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನಾಯಕ ಬಲದೇವ್ ಸಿಂಗ್ ಸಿರ್ಸಾ ಎಚ್ಚರಿಸಿದ್ದಾರೆ.

ಕಳೆದ ವರ್ಷ ಲಖಿಂಪುರ್ ಖೇರಿ ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನ್ಯಾಯ ಮತ್ತು ಜೈಲಿನಲ್ಲಿರುವ ಕೃಷಿ ಕಾನೂನು ಪ್ರತಿಭಟನಕಾರರ ಬಿಡುಗಡೆಗೆ ಒತ್ತಾಯಿಸಿ ಎಸ್ಕೆಎಂ ಮತ್ತು ರೈತ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಲು ಕರೆ ನೀಡಿದ್ದವು.

ಎಸ್ಕೆಎಂ ನಾಯಕ ಬಲದೇವ್ ಸಿಂಗ್ ಸಿರ್ಸಾ, “ನಮ್ಮ ಬೇಡಿಕೆಗಳನ್ನು ಪ್ರತಿಭಟನೆಯ ಮೂಲಕವೇ ಈಡೇರಿಸಿಕೊಳ್ಳುತ್ತೇವೆ, ಅದು ಏಕೆ? ಒಂದು ವೇಳೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ರೈತ ಸಂಘಟನೆ ಕರೆದಿರುವ ‘ಮಹಾಪಂಚಾಯತ್’ಗೆ ಮುಂಚಿತವಾಗಿ ಸಿಂಘು ಮತ್ತು ಗಾಜಿಪುರ ಸೇರಿದಂತೆ ದೆಹಲಿ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಭಾರಿ ಪೊಲೀಸ್ ಮತ್ತು ಭದ್ರತಾ ಉಪಸ್ಥಿತಿಯ ನಡುವೆ ಪ್ರತಿಭಟನೆ ನಡೆಸಲು ರೈತರು ಜಂತರ್ ಮಂತರ್ ಗೆ ಆಗಮಿಸಲು ಬ್ಯಾರಿಕೇಡ್ ಗಳನ್ನು ಮುರಿದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ದೆಹಲಿ-ಯುಪಿ ಗಡಿಯಲ್ಲಿರುವ ಘಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ

Join Whatsapp
Exit mobile version