Home ಮಲೆನಾಡು ಕೊಡಗು: ಬಸ್ ನಿಲ್ದಾಣದಲ್ಲಿ ರಾತ್ರಿ ಪ್ರತ್ಯಕ್ಷವಾದ ವಿಷಪೂರಿತ ಹಾವು

ಕೊಡಗು: ಬಸ್ ನಿಲ್ದಾಣದಲ್ಲಿ ರಾತ್ರಿ ಪ್ರತ್ಯಕ್ಷವಾದ ವಿಷಪೂರಿತ ಹಾವು

ಮಡಿಕೇರಿ: ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ವಿಷಪೂರಿತ ಹಾವೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಘಟನೆ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಖಾಸಗಿ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಕಾಣಿಸಿಕೊಂಡ ವಿಷಪೂರಿತ ಹಾವನ್ನು, ಗುಹ್ಯ ಗ್ರಾಮದ ಉರಗ ಸಂರಕ್ಷಕ ಸ್ನೇಕ್ ಸುರೇಶ್ ಅವರು ಸ್ಥಳಕ್ಕೆ ಆಗಮಿಸಿ ರಕ್ಷಿಸಿದರು. ಇದು ಕೋರಲ್ ಸ್ನೇಕ್ ಎಂಬ ಹೆಸರಿನ ಹಾವಾಗಿದ್ದು, ಹಾವುಗಳನ್ನು ಕಂಡರೆ ದಯವಿಟ್ಟು ಯಾರೂ ಕೊಲ್ಲಬೇಡಿ. ಮಾಹಿತಿ ನೀಡಿದರೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗುವುದು ಎಂದು ಸ್ನೇಕ್ ಸುರೇಶ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Join Whatsapp
Exit mobile version