Home ಟಾಪ್ ಸುದ್ದಿಗಳು ಶಿವನ ವೇಷ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ; ವ್ಯಕ್ತಿ ಬಂಧನ

ಶಿವನ ವೇಷ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ; ವ್ಯಕ್ತಿ ಬಂಧನ

ದಿಸ್ಪುರ್: ಶಿವನ ವೇಷ ಧರಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಅಸ್ಸಾಂ ನ ಗುವಾಹಟಿಯಲ್ಲಿ ನಡೆದಿದೆ.

ಬಿರಿಂಚಿ ಬೋರಾ ಎಂಬಾತ ಶಿವನ ವೇಷ ಧರಿಸಿಪ್ರತಿಭಟಿಸಿದ ವ್ಯಕ್ತಿ. ಪಾರ್ವತಿಯ ವೇಷ ಧರಿಸಿದ ಮಹಿಳಾ ಸಹ-ನಟಿ ಜೊತೆ ಬೀದಿ ನಾಟಕವನ್ನು ಪ್ರದರ್ಶಿಸುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಈ ವಿಡಿಯೋ ಇದೀಗ ಬಿಜೆಪಿ ಬೆಂಬಲಿಗರು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಶಿವನ ವೇಷ ಧರಿಸಿದ್ದಕ್ಕೆ ಬಿರಿಂಚಿ ಬೋರಾ ವಿರುದ್ಧ ಪ್ರತಿಭಟನೆಗಳನ್ನು ನಡೆಸಿರುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದಾಖಲಿಸಿದ ದೂರಿನನ್ವಯ ನಾಗಾನ್ ಸದರ್  ಠಾಣಾ ಪೊಲೀಸರು ಬಂಧಿಸಿದರು.

ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಬೇಕು ಎಂದು ಶಿವನ ವೇಷಧಾರಿ ಬಿರಿಂಚಿ ಬೋರಾ ಬೀದಿ ನಾಟಕದಲ್ಲಿ ಹೇಳಿದ್ದಾನೆ.

ಆರೋಪಿಗೆ ಜಾಮೀನು ನೀಡಲಾಗಿದೆ ಎಂದು ಎಸ್‌ಪಿ ನಾಗಾಂವ್, ಲೀನಾ ಡೋಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp
Exit mobile version