Home ಟಾಪ್ ಸುದ್ದಿಗಳು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರಿಗೆ ಗೌರವ ಡಾಕ್ಟರೇಟ್ ನೀಡಲು ಕೇಂದ್ರದ ಅನುಮತಿ ಕೋರಿದ...

ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರಿಗೆ ಗೌರವ ಡಾಕ್ಟರೇಟ್ ನೀಡಲು ಕೇಂದ್ರದ ಅನುಮತಿ ಕೋರಿದ ಅಲಿಘಡ ವಿವಿ

ಲಕ್ನೋ: ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವು ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರಿಗೆ ಅವರ ಅದ್ಭುತವಾದ ಜಾಗತಿಕ ಸೇವೆ ಪರಿಗಣಿಸಿ ಡಿ.ಲಿಟ್. ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ನೀಡಲು ಕೇಂದ್ರದ ಅನುಮತಿ ಕೋರಿದೆ.

  ವಿದೇಶಾಂಗ ಸಚಿವಾಲಯಕ್ಕೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವು ಮನವಿ ಸಲ್ಲಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಚಿವಾಲಯ, ಇದುವರೆಗೆ ಎಷ್ಟು ಮಂದಿ ವಿದೇಶಿ ಗಣ್ಯರಿಗೆ ಈ ರೀತಿ ಸದರಿ ವಿವಿಯು ಗೌರವ ಡಾಕ್ಟರೇಟ್ ನೀಡಿದೆ ಎಂಬ ಪಟ್ಟಿಯನ್ನು ನೀಡುವಂತೆ ಕೇಳಿತ್ತು. 2021ರ ಅಕ್ಟೋಬರ್ ನಲ್ಲಿ ಅಲಿಗಡ ವಿಶ್ವವಿದ್ಯಾನಿಲಯವು ಅಂಥ ಹೆಸರುಗಳ ಮಾಹಿತಿಯನ್ನು ಒದಗಿಸಿತ್ತು.

ಈ ವರ್ಷ ಜನವರಿಯಲ್ಲಿ ಮತ್ತೆ ವಿವಿಯು ಕೇಂದ್ರಕ್ಕೆ ಬರೆದು ಅನುಮತಿ ಕೋರಿದೆ. ಈ ಮನವಿಯಲ್ಲಿ ಉಪಕುಲಪತಿಗಳ ಕಾಲಾವಧಿ ಒಂದು ವರ್ಷ ಮುಂದುವರಿಸುವ ಕೋರಿಕೆಯೂ ಒಳಗೊಂಡಿತ್ತು. ಕೋವಿಡ್ 19ರ ಕಾರಣಕ್ಕೆ  ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆದಿಲ್ಲ. ಅವರು ಹೊಸ ವಿಸಿ ಯಾರಾಗಬಹುದೆಂಬ ಪಟ್ಟಿ ನೀಡಬೇಕಿತ್ತು. ಹಾಗಾಗಿ ಉಪಕುಲಪತಿ ತಾರಿಕ್ ಮನ್ಸೂರರ ಅಧಿಕಾರಾವಧಿಯನ್ನು ಒಂದು ವರ್ಷ ಹೆಚ್ಚಿಸುವಂತೆ ರಿಜಿಸ್ಟ್ರಾರ್ ಮನವಿ ಮಾಡಿದ್ದರು.

2017ರ ಮೇನಲ್ಲಿ ಮನ್ಸೂರ್ ಅವರು ಉಪಕುಲಪತಿಯಾಗಿ ನೇಮಕಗೊಂಡಿದ್ದರು. ಆದ್ದರಿಂದ ಮೇ 15, 2022ರಿಂದ ಒಂದು ವರ್ಷ ಇಲ್ಲವೇ ಹೊಸ ವಿಸಿ ನೇಮಕ, ಯಾವುದೋ ಅಲ್ಲಿಯವರೆಗೆ ಮನ್ಸೂರರ  ಅಧಿಕಾರಾವಧಿಯನ್ನು ಮುಂದುವರಿಸಲಾಯಿತು. ಇದರ ನಡುವೆ ಸೌದಿ ರಾಜಕುಮಾರರಿಗೆ ಗೌರವ ಡಾಕ್ಟರೇಟ್ ನೀಡುವ ವಿಚಾರವು ನಮ್ಮಅಧಿಕೃತ ಪರಿಶೀಲನೆಯಲ್ಲಿದೆ ಎಂದು ಭಾರತ ಸರಕಾರದ ಪರ ಉತ್ತರಿಸಲಾಗಿದೆ.

Join Whatsapp
Exit mobile version