Home ಟಾಪ್ ಸುದ್ದಿಗಳು ಉಳ್ಳಾಲ ಖಾಝಿಯಾಗಿ ಕಾಂತಪುರಂ ಎ.ಪಿ. ಉಸ್ತಾದ್ ನೇಮಕ: ಅತ್ಯಂತ ಸಂತಸದ ವಿಷಯ ಎಂದ ಸ್ಪೀಕರ್ ಯು.ಟಿ...

ಉಳ್ಳಾಲ ಖಾಝಿಯಾಗಿ ಕಾಂತಪುರಂ ಎ.ಪಿ. ಉಸ್ತಾದ್ ನೇಮಕ: ಅತ್ಯಂತ ಸಂತಸದ ವಿಷಯ ಎಂದ ಸ್ಪೀಕರ್ ಯು.ಟಿ ಖಾದರ್

ಉಳ್ಳಾಲ : ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇಮಕವಾಗಿರುವುದು ನಮಗೆಲ್ಲರಿಗೂ ಅತ್ಯಂತ ಸಂತಸದ ವಿಷಯ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ನೂತನ ಖಾಝಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಉಳ್ಳಾಲ ಕ್ಷೇತ್ರ ಧಾರ್ಮಿಕ, ಶೈಕ್ಷಣಿಕ ಮತ್ತು ಆರೋಗ್ಯದ ಮಾದರಿ ನಗರವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿಯವರು ಉಳ್ಳಾಲದ ಖಾಝಿ ಆಗಿರುವುದು ನಗರಕ್ಕೆ ಹೊಸ ಕಳೆ ತರಲಿದೆ ಎಂದು ಹೇಳಿದ್ದಾರೆ.

Join Whatsapp
Exit mobile version